ಮಂಗಳೂರು: ಬಂದರು ನಗರಿ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ನವೀಕೃತ ಪಾಕ ಶಾಲೆ ‘ಅನ್ನಪೂರ್ಣೆ’ಯ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನೆರವೇರಿತು.
ಶ್ರೀಗಳು ಬಂಟ್ವಾಳ್ ಮೊಕ್ಕಾಂ ನಿಂದ ಆಗಮಿಸಿದ್ದು ಶ್ರೀಗಳವರಿಗೆ ಮಂಗಳೂರು ಪೇಟೆಯ ವತಿಯಿಂದ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀಗಳವರಿಂದ ಶ್ರೀ ವೀರ ವೆಂಕಟೇಶ ದೇವರ ಸನ್ನಿಧಿಯಲ್ಲಿ ಮಹಾ ಪ್ರಾರ್ಥನೆ ನಡೆಯಿತು. ಜನವರಿ ೨೫ ರಂದು ನಡೆಯಲಿರುವ ಶ್ರೀ ದೇವರ ಪುನಃ ಪ್ರತಿಷ್ಠಾ ದಶಮಾನೋತ್ಸವ ಹಾಗೂ ನೂತನ ಬ್ರಹ್ಮ ರಥ ಸಮರ್ಪಣೆ ನಡೆಯಲಿರುವುದರಿಂದ ಶ್ರೀಗಳವರಿಂದ ಪ್ರಾರ್ಥನೆ ನಡೆದು ಪ್ರಸಾದ ನೀಡಿದರು. ಬಳಿಕ ನವೀಕೃತ ಅನ್ನಪೂರ್ಣೆ ( ಪಾಕ ಶಾಲೆ ) ಯ ಉದ್ಘಾಟನಾ ಸಮಾರಂಭ ಶ್ರೀಗಳವರಿಂದ ದೀಪ ಪ್ರಜ್ವಲನೆಯ ಮುಖೇನ ವಿಧ್ಯುಕ್ತವಾಗಿ ನೆರವೇರಿತು.