ಮಂಗಳೂರು: ಬಂದರು ಮಂಗಳೂರಿನ ಕಾರ್’ಸ್ಟ್ರೀಟ್’ನ ವೆಂಕಟರಮಣ ದೇವಾಲಯ ಬಳಿಯ ಬೃಹತ್ ಅಶ್ವಥ ಮರ ಇದ್ದಕ್ಕಿದ್ದಂತೆ ನೆಲಕ್ಕುರುಳಿದೆ.
ಮಂಗಳೂರಿನ ರಥಬೀದಿಯ ಪ್ರಮುಖ ಆಕರ್ಷಣೆ ಹಾಗೂ ಜನರ ಪೂಜ್ಯ ಭಾವನೆಯ ಕೇಂದ್ರವಾಗಿ ಈ ಬೃಹತ್ ಮರ ಗುರುತಾಗಿತ್ತು. ದೇವಾಲಯದ ಉತ್ಸವ ಸಂದರ್ಭದಲ್ಲಿ ವಿವಿಧ ಕೈಂಕರ್ಯಗಳಿಗೂ ಈ ರಾಜ ವೃಕ್ಷ ಸಾಕ್ಷಿಯಾಗುತ್ತಿತ್ತು. ಇಂದು ಬೆಳಿಗ್ಗೆ 7.30ರ ಸುಮಾರಿಗೆ ಈ ಮರ ಉರುಳಿಬಿದ್ದಿದೆ ಎನ್ನಲಾಗಿದೆ.
ಈ ದೈತ್ಯ ವೃಕ್ಷ ಇದ್ದಕ್ಕಿದ್ದಂತೆ ನೆಲಕ್ಕುರುಳಿಬಿದ್ದಿದ್ದು ಈ ಅವಘಡದಲ್ಲಿ ಸಮೀಪದಲ್ಲಿದ್ದ ನೀರಿನ ಟ್ಯಾಂಕ್ ಹಾಗೂ ಕೆಲವು ವಾಹನಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ.
ಇದನ್ನೂ ಓದಿ.. ರಥಬೀದಿ ವೆಂಕಟರಮಣ ದೇವಳದಲ್ಲಿ ಸುಧೀಂದ್ರ ತೀರ್ಥರ ‘ಗುರು ಪಾದುಕಾ ಮಂಟಪ’ ಉದ್ಘಾಟನೆ