ಬೆಂಗಳೂರು: ಸಮಾಜದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ಸರಿಯಾದ ಸದುಪಯೋಗ ಮತ್ತು ರಕ್ಷಣೆ ಈ ಸಂಸ್ಥೆ ಮುಂದಾಗಿರುವುದು ಸಂತೋಷದ ವಿಷಯ ಎಂದು ಮಾಜಿ ಶಾಸಕ ಎಸ್ ಮುನಿರಾಜು ಹೇಳಿದ್ದಾರೆ.
ಪೀಣ್ಯ ದಾಸರಹಳ್ಳಿ ಸಮೀಪ, ಕೆರೆ ಗುಡ್ಡದಹಳ್ಳಿಯಲ್ಲಿ ಜನ್ಮಭೂಮಿ ನಾಗರಾಜು ನೇತೃತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸೇವಾ ಸಮಿತಿಯ ಉದ್ಘಾಟನೆ ನೆರವೇರಿತು.
ಸಮಿತಿ ಉದ್ಘಾಟಿಸಿ ಮಾತನಾಡಿದ ಎಸ್ ಮುನಿರಾಜು, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ನಿಶಕ್ತರಾದ ಜನರಿಗೆ ಈ ಸಂಸ್ಥೆ ದಾರಿದೀಪವಾಗಲಿ , ಮುಂದೆಯೂ ಕೂಡ ಈ ಸಂಸ್ಥೆ ನಿಂತ ನೀರಾಗದೆ ನಿರಂತರ ಚಟುವಟಿಕೆಯಿಂದ ಜನರ ರಕ್ಷಣೆಯ ಗುರಿ ಹೊಂದಲಿ ಎಂದರು.
ಉಪ ಪೊಲೀಸ್ ಆಯುಕ್ತ ಶಿವರಾಜು ಮಾತನಾಡಿ ಮಾನವನ ಹಕ್ಕು ಹಗರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಅದನ್ನು ಕೇಳಲು ಶಕ್ತಿ ಇರುವುದಿಲ್ಲ ಅಂತಹ ಜನರ ಬಾಳಿಗೆ ನಿಂತ ಈ ಸಂಸ್ಥೆ ನಮ್ಮೆಲ್ಲರ ಸಹಾಯ ಸಲಹೆ ಇದ್ದೆ ಇರುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಜನ್ಮಭೂಮಿ ನಾಗರಾಜು ಮಾತನಾಡಿ ಸುಮಾರು ವರ್ಷಗಳಿಂದ ಸ್ನೇಹಿತರು ಸಮಾಜದಲ್ಲಿನ ಅಸಮಾನತೆ, ಭ್ರಷ್ಟಾಚಾರದಿಂದ ಸೋತ ಉದಾಹರಣೆಗಳಿವೆ. ಅದನ್ನೆಲ್ಲ ಮನಗಂಡು ಸರಿಯಾದ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಕನ್ನಡ ಸಂಸ್ಥೆ ಕಟ್ಟಿದ್ದೇವೆ ಮುಂದೆ ನ್ಯಾಯ ರೀತಿಯಾಗಿ ನ್ಯಾಯ ದೊರಕಿಸಲು ಸಜ್ಜಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಗೋಪಣ್ಣ, ರಾಜ್ಯದ್ಯಕ್ಷ ಎ.ಪಿ ಶರಣ್, ಉಪ ಪೊಲೀಸ್ ಆಯುಕ್ತರಾದ ಶಿವರಾಜು, ಸಿದ್ದರಾಜು, ನಟರಾದ ರವಿಗೌಡ, ಚೇತನ್ ಚಂದ್ರ, ಸಮಾಜ ಸೇವಕರಾದ ಸಂಜಯ್ ಗೌಡ , ಸಾಮ್ರಾಟ್ ಗೌಡ್ರು, ರವಿ ಎಂ ಎಸ್ ಗೌಡ, ಮೊದಲಾದವರು ಸಮಾರಂಭದಲ್ಲಿ ಭಾಗವಹಿಸಿದ್ದರು.