ಮಕರಸಂಕ್ರಾಂತಿ ದಿನವೇ ಬೆಚ್ಚಿಬೀಳಿಸಿದ ಭೀಕರ ಅಪಘಾತ.. ಕಾಯಕಕ್ಕೆ ತೆರಳುತ್ತಿದ್ದವರು ಸೇರಿದ್ದು ಮಸಣಕ್ಕೆ..
ದಾವಣಗೆರೆ: ಸಂಕ್ರಮಣ ದಿನದಂದು ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬೆಳ್ಳಂ ಬೆಳಗ್ಗೆ 7 ಜನರ ಸಾವಿಗೆ ಸಾಕ್ಷಿಯಾಗಿದೆ ರಾಷ್ಟ್ರೀಯ ಹೆದ್ದಾರಿ. ಜಗಳೂರು ತಾಲ್ಲೂಕಿನಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಇಂಡಿಕಾ ಕಾರು ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ನಾಲ್ವರು ಜನ ಸಾವನ್ನಪ್ಪಿದ್ರೆ ಇನ್ನುಳಿದವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಜಗಳೂರಿನ ಖಾನನಕಟ್ಟೆ ಗ್ರಾಮದ ಬಳಿ ಅಪಘಾತ ಸಂಬವಿಸಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸಾವನ್ನಪ್ಪಿದವರು ಯಾರು, ಎಲ್ಲಿಗೆ, ಯಾಕೆ ಹೋಗುತ್ತಿದ್ದರು ಎಂದು ತನಿಖೆಯನ್ನು ಪೋಲೀಸ್ ನಡೆಸುತ್ತಿದ್ದಾರೆ. ಅಪಘಾತದ ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಎಸ್.ಪಿ. ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.