ಬೆಂಗಳೂರು: ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಮಡಿವಾಳ ಮಾಚೀದೇವರ ದೇವರ ಜಯಂತೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ಕಿಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ತಹಶೀಲ್ದಾರ್ ಶಿವರಾಜ್, ಜಯಂತಿಗಳು ಕೇವಲ ಪೂಜೆಗೆ ಸೀಮಿತವಾಗದೇ ಶರಣರ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಸಾರ್ಥಕ ಜೀವನ ಸಾಧ್ಯ ಎಂದರು.
ಸರಕಾರಗಳು ಜಯಂತಿಗಳ ಆಚರಣೆಯೊಂದಿಗೆ ಶರಣರ ಜೀವನದ ಸಂದೇಶಗಳನ್ನು ಜನರಿಗೆ ತಿಳಿಸುವ ಪ್ರಯತ್ನವಾಗಿದೆ .ಶರಣರು ಕೇವಲ ನುಡಿದವರಲ್ಲ ಅದರ ಬದಲಾಗಿ ನುಡಿದಂತೆ ನಡೆದು ಸಾರ್ಥಕ ಜೀವನವನ್ನು ನಡೆಸಿದ್ದಾರೆ.ಅವರ ಕಾಯಕ ನಿಷ್ಠೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಅವಶ್ಯಕವಾಗುತ್ತದೆ.ಅವರ ಸಂದೇಶದಂತೆ ಮೇಲು ಕೀಳು ಭಾವನೆ ಬಿಟ್ಟು ಎಲ್ಲರೂ ಸಮಾನರು ಎಂದು ಬದುಕಿದಾಗ ಸಮಾಜದ ಏಳಿಗೆ ಸಾಧ್ಯವಾಗುತ್ತದೆ.ಜಯಂತಿಯ ಆಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದುಸಂತಸ ತಂದಿದೆ ಒಗ್ಗಟ್ಟಿನಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ ಎಂದರು.
ಪೊಲೀಸ್ ಇನ್ಸ ಪೆಕ್ಟರ್ ನವೀನ್ ಮಾತನಾಡಿ
ರಾಷ್ಟ್ರದ ಆಡಳಿತವು ಅನುಭವ ಮಂಟಪದಂತಿರಬೇಕು.ನಿಜವಾದ ಶುದ್ದಿಯೆಂದರೆ ಬಹಿರಂಗ ಶುದ್ದಿಯಲ್ಲ. ಅಂತರಂಗ ಶುದ್ದಿಯೇ ಸರಿಯಾದ ಶುದ್ದಿ ಅಂತರಂಗದ ಕೊಳೆಯನ್ನು ತೊಳೆಯುವವನೇ ಮಡಿವಾಳ. ಒಂದೊಮ್ಮೆ ಬಸವಣ್ಣ ಹೇಳಿದಂತೆ ಬೇಡುವವನ ಕೈಗಳಲ್ಲಿದೇ ಬಡವನಾಗಿದ್ದೇನೆ ಎನ್ನುವ ಮೂಲಕ ದಾನದ ಮಹತ್ವವನ್ನು ತಿಳಿಸಿದ್ದಾರೆ. ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನಗಳಿದ್ದವು.ಹಿಂದೆ ಜಾತಿ ಎಂಬುದು ಅವರ ಕೆಲಸವನ್ನು ಆಧರಿಸಿತ್ತು ಇತ್ತೀಚಿನ ದಿನಗಳಲ್ಲಿ ಚಿತ್ರಣ ಬದಲಾಗುತ್ತಿದೆ.ನಮ್ಮ ಮುಂದಿನ ಪೀಳಿಗಿಗೆ ಶರಣರ ಆದರ್ಶಗಳನ್ನು ಹಾಗೂ ಅದರ ಸ್ವಾರಸ್ಯವನ್ನು ಮಕ್ಕಳಿಗೆ ತಿಳಿ ಹೇಳಬೇಕು. ಮಕ್ಕಳಿಗೆ ಅವರ ಸಾಧನೆ ಪ್ರೋತ್ಸಾಹಿಸಿ ಅವರ ಬೆನ್ನತ್ತಟುವ ಕೆಲಸವಾಗದರೆ ಅವರು ಮತ್ತಷ್ಟು ಸಾಧಿಸಲು ಮುಂದಾಗುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಮಹಾನಿಯರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳಾ ಮಹಾದೇವ್,ತಾಲೂಕು ರೇಷ್ಮೇ ಸಹಾಯಕ ನಿರ್ದೇಶಕ ಉದಯ್,ಸಬ್ಇನ್ಸಪೆಕ್ಟರ್ ಸೋಮಶೇಖರ್, ಮಡಿವಾಳ ಸಮಾಜದ ಗಣ್ಯರನೇಕರು ಭಾಗವಹಿಸಿದ್ದರು.