ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಹುರಿಯಾಳುಗಳ ಪಟ್ಟಿ ಸಿದ್ದವಾಗಿದೆ. ನವದೆಹಲಿಯಲ್ಲಿ ಶಿವರಾತ್ರಿ ದಿನದಂದೇ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಬಿಡುಗಡೆ ಮಾಡಿದ್ದಾರೆ.
ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ವರಿಷ್ಠರಾದ ಕೆ.ಸಿ.ವೇಣುಗೇಪಾಲ್, ಅಜಯ್ ಮಕೇನ್, ಪವನ್ ಖೇರಾ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು. ರಾಹುಲ್ ಗಾಂಧಿ ಕೇರಳದ ವಯನಾಡ್‌ನಲ್ಲಿ ಮತ್ತೊಮ್ಮೆ ಕಣಕ್ಕಿಳಿಯಲಿದ್ದಾರೆ ಎಂದವರು ಘೋಷಿಸಿದರು.
- ಕರ್ನಾಟಕದ 7 ಕ್ಷೇತ್ರಗಳು,
- ತೆಲಂಗಾಣದ 4 ಕ್ಷೇತ್ರಗಳು,
- ಛತ್ತೀಸ್ಗಡದ 6 ಕ್ಷೇತ್ರಗಳು,
- ಕೇರಳದ 15 ಕ್ಷೇತ್ರಗಳು,
- ಮೇಘಾಲಯದ 2 ಕ್ಷೇತ್ರಗಳು,
- ನಾಗಲ್ಯಾಂಡ್ 1 ಕ್ಷೇತ್ರ,
- ಸಕ್ಕಿಂನ 1 ಕ್ಷೇತ್ರ,
- ತ್ರಿಪುರದ 1 ಕ್ಷೇತ್ರ
ಹೀಗೆ ಒಟ್ಟು 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ನಾಯಕರು ಬಿಡಗಡೆ ಮಾಡಿದ್ದಾರೆ.
ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ:
ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್,
ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್,
ತುಮಕೂರು- ಎಸ್ಪಿ ಮುದ್ದಹನುಮೇಗೌಡ,
ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು),
ಹಾಸನ- ಶ್ರೇಯಸ್ ಪಟೇಲ್,
ವಿಜಯಪುರ- ಎಚ್ಆರ್ ಅಲ್ಗೂರ್,
ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ.
























































ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ: