ಈ ಹಸ್ಯ ಚಟಾಕಿಯ ಕತೃ ಯಾರೆಂಬುದು ಗೊತ್ತಿಲ್ಲ. ಆದರೆ ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದು ಸಕತ್ತಾಗಿ ವೈರಲ್ ಆಗ್ತಾ ಇದೆ. ಈ ತಮಾಷೆಯ ಪದಪುಂಜ ಎಲ್ಲರಲ್ಲೂ ಖುಷಿ ತರುತ್ತಿದೆ. ಓದುತ್ತಿದ್ದವರ ಮುಖದಲ್ಲಿ ಮುಗುಳುನಗು ಕಾಣುವುದಂತೂ ನಿಜ.
ಸಾಮಾಜಿಕ ಜಲತಾಣಗಳಲ್ಲಿ ವೈರಲ್ ಆಗುತ್ತಿರುವ ಸಂದೇಶವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ಈ ಲಾಕ್ಡೌನ್ ಒಂಥರಾ ಡಿಫರೆಂಟ್
ಎಷ್ಟು ಬೇಕಾದ್ರೂ ಲಿಕ್ಕರ್ 🍺 ಸಿಗುತ್ತೆ,
ಆದ್ರೆ ಅರ್ಜೆಂಟ್ ಆಗಿ ಒಂದು ನಿಕ್ಕರ್ 🩳 ಬೇಕು ಅಂದ್ರು ಸಿಗಲ್ಲ……
😂😂😂😂😂ಮದುವೆಗೆ ಅವಕಾಶ ಇದೆ ಅಂತೆ….
ಆದ್ರೆ,
ಬಟ್ಟೆ ಅಂಗಡಿ 👕,
ಆಭರಣ ಅಂಗಡಿ 👑,
ಫ್ಯಾನ್ಸಿ ಅಂಗಡಿ 💄
ಎಲ್ಲವೂ ಬಂದ್… ಹಾಗಾದರೆ ಮದುಮಕ್ಕಳು ಬರ್ಮುಡಾ ಮತ್ತು ನೈಟಿ ಯಲ್ಲಿ ಮದುವೆ ಮಾಡಿಕೊಳ್ಳುವುದೇ…..
😂😂😂😂😂ಎಣ್ಣೆ, ಬಾರ್, ರೆಸ್ಟೋರೆಂಟ್ ಬಂದ್
ಹೆಂಡತಿ ಖುಷ್. 🙎🏻♀️
ಬೆಳ್ಳಿ, ಬಂಗಾರ, ಸೀರೆ ಅಂಗಡಿ ಬಂದ್
ಗಂಡ ಖುಷ್. 🙎🏻♂️
ಸ್ಕೂಲ್, ಕಾಲೇಜ್ ಬಂದ್
ಮಕ್ಕಳು ಖುಷ್. 👯🏻♀️
ಒಟ್ನಲ್ಲಿ ಸುಖ ಸಂಸಾರಕ್ಕೆ ಇನ್ನೂ ಏನ್ ಬೇಕು……
😂😂😂😂😂ನಿಮ್ಮ ನೆಚ್ಚಿನ ಆಟ ಯಾವುದೂ !!?
🤔🤔🤔🤔
ಸಧ್ಯಕ್ಕೆ….. ಉಸಿರಾಟ
😤😤😤😤
😂😂😂😂😂ಸರ್ಕಾರ ಹೇಳಿದಾಂಗೆ ಮನೇಲಿ ಇದ್ರೆ
“ಮೇ” ನಲ್ಲಿ ಸಿಗೋಣ,
ವಿನಾ ಕಾರಣ ಮನೆ ಬಿಟ್ಟು ಹೊರಗೆ ಬಂದ್ರೆ “ಮೇಲೆ” ಸಿಗೋಣ.
😂😂😂😂😂ಸಧ್ಯಕ್ಕೆ ಈಗ ಇರೋದು ಏರಡೇ ಕಾಲಗಳು….. 🤔🤔
ಒಳಗಡೆ ಇದ್ರೆ “ಉಳಿಗಾಲ” 🏘️
ಹೊರಗಡೆ ಬಂದ್ರೆ “ಕೊನೆಗಾಲ” 🎡
😂😂😂😂😂ಪ್ರೇಮಿಗಳು ಒಟ್ಟಿಗೆ ಇರೋ ದಿನ
“ವ್ಯಾಲೆಂಟೈನ್” ❤️ ಡೇ.
ಮನೆ ಮಂದಿಯೆಲ್ಲಾ ಒಟ್ಟಿಗೆ ಇರೋ ದಿನ “ಕ್ವಾರಂಟೆನ್” 🏚️ ಡೇ.
😂😂😂😂😂ಅಂದು ಯುದ್ಧ ⚔️⚔️ಮಾಡಿ ದೇಶವನ್ನು ಉಳಿಸಬೇಕಿತ್ತು.
ಆದ್ರೆ ಈ ಇಂದು ನಿದ್ದೆ 😴😴 ಮಾಡಿ ದೇಶವನ್ನು ಉಳಿಸುವ ಪರಿಸ್ಥಿತಿ ಬಂದಿದೆ.
😂😂😂😂😂ಅಂತೂ ಇಂತೂ
“ಎಣ್ಣೆ 🍻 ಹಾಲು” 🥛
ಬೆಳಿಗ್ಗೆ ಒಟ್ಟಿಗೆ ತರೂ ಟೈಮ್ ಬಂತು…..
😂😂😂😂😂ಇನ್ಮುಂದೆನೂ ಕೋರೋನಾ ತೊಲಗದೆ ಇದ್ರೆ ಬಿಲ್ಡರ್ಸ್ ಗಳು ಹೀಗೆ ಜಾಹೀರಾತು ನೀಡಬಹುದು…..
2 ಬೆಡ್ ರೂಮ್,
ಕಿಚನ್, ಹಾಲ್,
ಐಸೋಲೇಷನ್ ರೂಮ್,
ಆಕ್ಸಿಜನ್ ಪೈಪ್ ಲೈನ್, ಮತ್ತೆ ವೆಂಟಿಲೇಟರ್ ಸೌಲಭ್ಯ ಇದೆ”. !!!!!
😂😂😂😂😂ಏನ್ ಮಾಡಿದ್ರೂ ಟೈಮ್ ಪಾಸ್ ಆಗ್ತಾ ಇಲ್ಲಾ ಅಂದ್ರೆ…..
ನೀವೇ ನಟಿಸಿರುವ , ನಿಮ್ಮದೇ ಮೂವೀ
” ನಿಮ್ಮ ಮದುವೆ ”
ಸಿಡಿ ಹಾಕಿಕೊಂಡು ನೋಡಿ…. 😂
ಸತ್ಯ ಘಟನೆ ಆಧಾರಿತ ಚಿತ್ರ.
😂😂😂😂😂