ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನ ಈ ತಿಂಗಳ 15ರಿಂದ ನಡೆಯಲಿದೆ. ಈ ಸಂಬಂಧ ವಿಧಾನ ಪರಿಷತ್ ಸಚಿವಾಲಯದಿಂದ ಮೇಲ್ಮನೆಯ ಎಲ್ಲಾ ಶಾಸಕರಿಗೆ ಸೂಚನೆ ರವಾನೆಯಾಗಿದೆ.
ಭಾರತ ಸಂವಿಧಾನದ 174(1) ನೇ ಅನುಚ್ಛೇದದ ಮೇರೆಗೆ, ಘನತವತ್ತ ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ 2024ನೇ ಇಸವಿ ಜುಲೈ, 15ನೇ ತಾರೀಖು ಸೋಮವಾರದಂದು ಬೆಳಗ್ಗೆ 11.00 ಗಂಟೆಗೆ ಕರ್ನಾಟಕ ವಿಧಾನ ಪರಿಷತ್ತು, ಬೆಂಗಳೂರಿನ ವಿಧಾನ ಸೌಧದ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಸಭೆ ಸೇರುವಂತೆ ಕರೆ ನೀಡಿರುತ್ತಾರೆ ಎಂದು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು ಸದನದ ಸದಸ್ಯರಿಗೆ ಮಾಹಿತಿ ಪತ್ರ ರವಾನಿಸಿದ್ದಾರೆ.