ಬೆಂಗಳೂರು: ರಾಜ್ಯದ ವಕೀಲರು ಇದೀಗ ರಕ್ಷಣೆಗಾಗಿ ಸಂಘರ್ಷಕ್ಜಿಳಿದಿದ್ದಾರೆ. ಸರ್ಕಾರದ ವಿರುದ್ದ ಸಮರ ಸಾರಿರುವ ವಕೀಲರ ಸಮೂಹ ಡಿಸೆಂಬರ್ 27ರಂದು ಬೆಳಗಾವಿಗೆ ಲಗ್ಗೆ ಹಾಕಲು ನಿರ್ಧರಿಸಿದ್ದಾರೆ.
ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ಸರಣಿ ಸಭೆ, ಹೋರಾಟ ನಡೆಸುತ್ತಿರುವ ವಕೀಲರು ಇದೀಗ ಸರ್ಕಾರದ ನಿರ್ಲಕ್ಷ್ಯದ ವಿರುದ್ದ ಪ್ರತಿಭಟನೆಯ ಅಸ್ತ್ರ ಪ್ರಯೋಗಿಸಲು ಸಜ್ಜಾಗಿದ್ದಾರೆ. ಈ ಹೋರಾಟದ ನೇತೃತ್ವವನ್ನು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ವಹಿಸಿದ್ದಾರೆ.
ವಕೀಲರ ಈ ಹೋರಾಟ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಎ.ಪಿ.ರಂಗನಾಥ್, ಡಿಸೆಂಬರ್ 27ರಂದು ಬೆಳಿಗ್ಗೆ ಬೆಳಗಾವಿಯಲ್ಲಿ ಜಮಾಯಿಸಿ ಹೋರಾಟ ನಡೆಸಲಾಗುವುದು. ಈ ‘ಬೆಳಗಾವಿ ಚಲೋ’ದಲ್ಲಿ ರಾಜ್ಯದ ವಕೀಲರೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ, ಬೆಂಗಳೂರು ವಕೀಲರ ಸಂಘ ಮತ್ತು ವಕೀಲರ ಪರಿಷತ್ ಈಗಾಗಲೇ ತೀರ್ಮಾನ ಮಾಡಿದೆ. ವಕೀಲರ ಒತ್ತಾಯವನ್ನು ಸರ್ಕಾರ ನಿರ್ಲಕ್ಷಿಸಿದರೆ ಬೆಳಗಾವಿಯ ಸುವರ್ಣ ಸೌಧದ ಮುಂದೆ ಬೆಳಗಾವಿ ಚಲೋ ಹೋರಾಟ ನಡೆಸಲಾಗುವುದೆಂದು ಎ.ಪಿ.ರಂಗನಾಥ್ ಅವರು ಕೆಲವು ದಿನಗಳ ಹಿಂದೆಯೇ ಎಚ್ಚರಿಕೆ ನೀಡಿದ್ದರು.

























































