ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದಿಗೆ ಒಂದು ವರ್ಷ ಪೂರೈಸಿದೆ. ಗ್ಯಾರೆಂಟಿ ಯೋಜನೆಗಳ ಜಾರಿ ಮೂಲಕ ದೇಶದಲ್ಲಿ ಸುದ್ದಿಯಾಗಿರುವ ಸಿದ್ದರಾಮಯ್ಯ-ಶಿವಕುಮಾರ್ ಆಡಳಿತ ವೈಖರಿ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ರಾಜ್ಯ ಸರ್ಕಾರ ಶೂನ್ಯ ಸಾಧನೆ ಮಾಡಿದೆ ಎಂದು ಬಿಜೆಪಿ ಟೀಕಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಒಂದು ವರ್ಷ ಪೂರೈಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಪೂರೈಸಿದ್ದು ವರುಷ ಮಾತ್ರ, ಸಾಧಿಸಿದ್ದು ಶೂನ್ಯ ಎಂದಿದ್ದಾರೆ. ರಾಜ್ಯ ಸರ್ಕಾರದ ಈ ಅವಧಿಯಲ್ಲಿ ಖಜಾನೆ ಖಾಲಿ ಖಾಲಿ, ವಸೂಲಿ ಭಾರಿ ಭಾರಿ” ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
“ಪೂರೈಸಿದ್ದು ವರುಷ ಮಾತ್ರ
ಸಾಧಿಸಿದ್ದು ಶೂನ್ಯ
ಖಜಾನೆ ಖಾಲಿ ಖಾಲಿ
ವಸೂಲಿ ಭಾರಿ ಭಾರಿ”ರಾಜ್ಯದ @siddaramaiah ಅವರ ನೇತೃತ್ವದ @INCKarnataka ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮ:-
➡️ ನಿರುದ್ಯೋಗದ ಭವಣೆ ಹೆಚ್ಚಿತು.
➡️ ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು.
➡️… pic.twitter.com/teV7KF492G— Vijayendra Yediyurappa (Modi Ka Parivar) (@BYVijayendra) May 20, 2024
ರಾಜ್ಯದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಬಿಟ್ಟಿ ಭಾಗ್ಯಗಳಿಗಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ ಪರಿಣಾಮವಾಗಿ ನಿರುದ್ಯೋಗದ ಭವಣೆ ಹೆಚ್ಚಿತು, ಶಿಕ್ಷಣ ಕ್ಷೇತ್ರ ಎಡವಿ ಬಿದ್ದಿತು, ಉತ್ಪನ್ನ ಕ್ಷೇತ್ರ ಸೊರಗಿತು, ನಾರಿ ಕುಲ ರಕ್ಷಣೆ ಇಲ್ಲದೆ ನಲುಗಿತು, ದಲಿತ ಕಲ್ಯಾಣ ಕಾರ್ಯಗಳು ಕುಸಿಯಿತು, ಹಿಂದುಳಿದವರ ಅಭಿವೃದ್ಧಿ, ಹಿಂದುಳಿಯಿತು. ಬೆಳೆಯೆಲ್ಲ ಒಣಗಿತು, ರೈತರ ಬಾಳು ಗೋಳಾಯಿತು ಎಂದು ವಿಜಯೇಂದ್ರ ಅವರು ಲೇವಡಿ ಮಾಡಿದ್ದಾರೆ.