10 ರೂ. ಲಂಚ ಪಡೆದಿರುವುದು ಸಾಬೀತಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ. ಸಚಿವ ನಿರಾಣಿ ಬಹಿರಂಗ ಸವಾಲು.. ಬೇರೆಯವರ ಬಳಿ ಲಂಚ ಕೇಳುವ ಸ್ಥಿತಿ ನನಗೆ ಬಂದಿಲ್ಲ… ನನ್ನ ಹೆಸರು ದುರುಪಯೋಗಪಡಿಸಿಕೊಂಡರೆ ಕ್ರಮ.. ಆಪ್ತರಿರೂ ಎಚ್ಚರಿಕೆ..
ಕೊಪ್ಪಳ: ಎಂಆರ್‌ಎನ್
ಫೌಂಡೇಷನ್ ಮೂಲಕ ನಾವು ₹ 5000 ಕೋಟಿ ವ್ಯವಹಾರ ನಡೆಸುತ್ತಿದ್ದು, 75 ಸಾವಿರ ಮಂದಿಗೆ ಉದ್ಯೋಗ ನೀಡಿದ್ದೇವೆ. ನನಗೆ ಯಾರಾದರೂ ₹10 ರೂ. ಲಂಚ ಕೊಟ್ಟಿದ್ದೇನೆ ಎಂದು ಸಾಬೀತು ಮಾಡಿದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸವಾಲು ಹಾಕಿದ್ದಾರೆ. .
ಕೊಪ್ಪಳ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉದ್ಯಮಿಯಾಗಿದ್ದು ₹5-10 ಲಕ್ಷಕ್ಕೆ ಬೇರೆಯವರಿಂದ ಒಡ್ಡುವಂತಹ ದಯಾನಿಯ ಸ್ಥಿತಿಗೆ ಬಂದಿಲ್ಲ. ನನ್ನ ಫೌಂಡೇಷನ್ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ₹10-20 ಲಕ್ಷದ ಬದಲಿಗೆ ₹10 ರೂ. ಕೊಟ್ಟಿರುವುದು ಸಾಬೀತಾದರೆ ಒಂದೇ ಒಂದೂ ಕ್ಷಣವೂ ಅಧಿಕಾರದಲ್ಲಿ ಇರುವುದಿಲ್ಲ ಎಂದು ಗುಡುಗಿದರು.
ಇಲಾಖೆಯಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣಕ್ಕೆ ಬೇಡಿಕೆ ಇಟ್ಟರೂ ಸಹಿಸುವುದಿಲ್ಲ. ಅಂಥಹ ಮಾಹಿತಿ ಇದ್ದರೆ ನೇರವಾಗಿ ನನಗೆ ದೂರು ಕೊಡಬಹುದು.ಇಲಾಖೆಯನ್ನು ಸಾಧ್ಯವಾದಷ್ಟು ಪಾರದರ್ಶಕವಾಗಿ ಮುನ್ನಡೆಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.