(ಚಿತ್ರ: ಮಂಜು ನೀರೇಶ್ವಾಲ್ಯ)
ಮಂಗಳೂರು: ಹಬ್ಬಹರಿದಿನಗಳಂದು ವಿಶೇಷ ಮಹೋತ್ಸವಗಳಿಗೆ ಸಾಕ್ಷಿಯಾಗುತ್ತಿರುವ ಮಂಗಳೂರಿನ ಕಾರ್‌ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನ ಇದೀಗ ಅನನ್ಯ ಕೈಂಕರ್ಯದಿಂದ ಆಸ್ತಿಕರ ಕುತೂಹಲದ ಕೇಂದ್ರಬಿಂದುವಾಗಿದೆ., ಲೋಕ ಕಲ್ಯಾಣಾರ್ಥ ಶ್ರೀ ವೆಂಕಟರಮಣ ದೇವರಿಗೆ ‘ಲಕ್ಷ ಪ್ರದಕ್ಷಿಣೆ’ ಆಯೋಜಿಸಲಾಗಿದ್ದು, ಈ ಕುರಿತಂತೆ ದೇವಾಲಯದ ಆಡಳಿತ ಮಂಡಳಿ ಆಸ್ತಿಕ ಸಮುದಾಯಕ್ಕೆ ಮಾಹಿತಿ ರವಾನಿಸಿದೆ.
ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕ್ರೋಧಿ ನಮ ಸಂವತ್ಸರದ ಆಷಾಡ ಶುದ್ಧ ಏಕಾದಶಿ ತಾ.17.07.2024, ಬುಧವಾರದಿಂದ ಕಾರ್ತಿಕ ಶುದ್ಧ ಏಕಾದಶಿ 17.11.2024ರ ವರೆಗೆ ಲೋಕ ಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ಧಿಗಾಗಿ ‘ಲಕ್ಷ ಪ್ರದಕ್ಷಿಣೆ’ ಕೈಂಕರ್ಯ ನೆರವೇರಲಿದೆ.
ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12.30ರ ವರೆಗೆ ಭಕ್ತಾದಿಗಳಿಗೆ ಪ್ರದಕ್ಷಿಣೆಗೆ ಅವಕಾಶವಿದ್ದು ಮಾತೆಯರು, ಮಹನೀಯರು ಹಾಗೂ ಮಕ್ಕಳು ಲಕ್ಷ ಪ್ರದಕ್ಷಿಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಈ ಕೈಂಕರ್ಯ ಮೂಲಕ ಶ್ರೀ ದೇವರ ಮತ್ತು ಶ್ರೀ ಗುರುವರ್ಯರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ವೆಂಕಟರಮಣ ದೇವಸ್ಥಾನದ ಪ್ರಕಟಣೆ ತಿಳಿಸಿದೆ.