ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಪ್ರತಿಷ್ಠಿತ ‘ಹಿರೋಸ್ ಆನ್ ದ ರೋಡ್’ ಪ್ರಶಸ್ತಿ ಸಿಕ್ಕಿದೆ. ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಥಿಗಳಾದ ಎಜಾಜ್ ಅಹಮದ್ ಷರೀಫ್ ಮತ್ತು ಇಶಾಕ್ ಶರೀಫ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೆಹಲಿಯ ASRTU ಸಂಸ್ಥೆಯು ಅಪಘಾತ ರಹಿತ ಚಾಲಕರನ್ನು ಗೌರವಿಸಿ, ಪ್ರೋತ್ಸಾಹಿಸುವ ಸಲುವಾಗಿ ಅಪಘಾತ ರಹಿತವಾಗಿ ನಗರ ಸೇವೆ ಹಾಗೂ ಗ್ರಾಮೀಣ, ಅಂತರ್-ನಗರ ಸೇವೆಗಳು, ಗ್ರಾಮಾಂತರ ಸಮೂಹ ಸಾರಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲಕರನ್ನು ಗುರುತಿಸಿ ರಾಷ್ಟ್ರೀಯ ಮಟ್ಟದಲ್ಲಿ ಗೌರವಿಸುತ್ತದೆ.
ಇವರೇ ನೋಡಿ ಹೀರೋಸ್ ಆನ್ ದ ರೋಡ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 33 ವರ್ಷಗಳ ಕಾಲ ಅಪಘಾತ ರಹಿತ ಸೇವೆ ಸಲ್ಲಿಸಿರುವ ಚಾಲಕರಾದ ಎಜಾಜ್ ಅಹಮದ್ ಷರೀಫ್ (ಬಿ.ಸಂ.1904) ಮತ್ತು ಇಶಾಕ್ ಶರೀಫ್ (ಬಿ.ಸಂ.2197) ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಏಪ್ರಿಲ್ 18ರಂದು ದೆಹಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಸಿಬ್ಬಂದಿ ಪುರಸ್ಕಾರ ಸ್ವೀಕರಿಸಲಿದ್ದಾರೆ.