ದೆಹಲಿ: KSRTCಯ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿದೆ. ಉತ್ಕೃಷ್ಟ ಸಾರಿಗೆ ಸೇವೆಗೆ ಹೆಸರಾಗಿರುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪ್ರತಿಷ್ಠಿತ ‘ಗೌರ್ನೆನ್ಸ್ ನೌ’ ಒಂಬತ್ತನೇ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆ ಪ್ರಶಸ್ತಿ -2023 ಲಭಿಸಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿಷ್ಠಿತ ಗೌರ್ನೆನ್ಸ್ ನೌ ಒಂಬತ್ತನೇ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿಯನ್ನು ನಿಗಮದಲ್ಲಿ ಜಾರಿಗೊಳಿಸಿರುವ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ಪಡೆದಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದರು.
ದೇಶದ ಬೆಳವಣಿಗೆಗೆ ಪ್ರಮುಖವಾಗಿರುವ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಪ್ರಯತ್ನಗಳನ್ನು ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಅದರಂತೆ ಕರುನಾಡಿನ ಜನರ ಹೆಮ್ಮೆಯ ರಥ KSRTCಯನ್ನು ಎಚ್‌ಆರ್ – ಎಕ್ಸಲೆನ್ಸ್ (ಒಟ್ಟಾರೆ). ವಿಭಾಗದಡಿ ಆಯ್ಕೆ ಮಾಡಲಾಗಿದೆ.
ನಾಮನಿರ್ದೇಶನಗಳನ್ನು ಪ್ರಖ್ಯಾತ ತೀರ್ಪುಗಾರ ಸದಸ್ಯರು 6 ವಿಭಿನ್ನ ನಿಯತಾಂಕಗಳ ಅಡಿಯಲ್ಲಿ ಮೌಲ್ಯಮಾಪನ ಮಾಡಿದ್ದಾರೆ.
KSRTC Wins Governance Now 9th PSU National Award – 2023 pic.twitter.com/BkIhk47Z6X
— KSRTC (@KSRTC_Journeys) February 16, 2023