ಬೆಂಗಳೂರು: ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ದೇಶದಲ್ಲೇ ಉತ್ಕೃಷ್ಟತೆಗೆ ಪಾತ್ರವಾಗಿರುವ ಕೆಎಸ್ಸಾರ್ಟಿಸಿ ಪಾಲಿಗೆ ಇದೀಗ ಮತ್ತೊಂದು ಹಿರಿಮೆ ಸಂದಿದೆ. ಮಹತ್ವಾಕಾಂಕ್ಷೆಯ EV ಪವರ್ ಪ್ಲಸ್ ಬಸ್ ಇದೀಗ ರಾಜ್ಯದಲ್ಲಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಕೆಲವು ದಿನಗಳಿಂದ ಭಾರೀ ಪ್ರಚಾರಗಳಿಂದಾಗಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿರುವ EV ಪವರ್ ಪ್ಲಸ್ ಬಸ್ ಇಂದು ಸುಗಮ ಸೇವೆಗೆ ಮನ್ನುಡಿ ಬರೆದಿದೆ.
ಸೋಮವಾರ ಬೆಳಿಗ್ಗೆ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಂಗಳೂರು- ಮೈಸೂರು ಮಾರ್ಗದಲ್ಲಿ ಮೊದಲ ಬಾರಿಗೆ EV ಪವರ್ ಪ್ಲಸ್ ಬಸ್ ಸಾರ್ವಜನಿಕ ಪ್ರಯಾಣಿಕರಿಗಾಗಿ ಸೇವೆ ಪ್ರಾರಂಭಿಸಿದೆ.
ನಿಗದಿಯಂತೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭಿಸಿರುವ EV ಪವರ್ ಪ್ಲಸ್ ಬಸ್ ಬಗ್ಗೆ ಪ್ರಯಾಣಿಕರೂ ಕೂಡಾ ತಮ್ಮ ಪಾಲಿಗೂ ಹೆಮ್ನೆಯ ಯಾತ್ರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಬೆಳಿಗ್ಗೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ಮೊದಲ ಪ್ರಯಾಣಿಕರಿಗೆ ಹೂಗುಚ್ಚ ನೀಡಿ ಶುಭ ಕೋರಿದರು. ಬಳಿಕ ಮೊದಲ ಪ್ರಯಾಣದಲ್ಲಿ ಅಧಿಕಾರಿಗಳೂ ಭಾಗಿಯಾದರು.
ವಿಭಾಗೀಯ ನಿಯಂತ್ರಣಾಧಿಕಾರಿ ಬೆಂಗಳೂರು ಕೇಂದ್ರೀಯ ವಿಭಾಗ , ವಿಭಾಗೀಯ ನಿಯಂತ್ರಣಾಧಿಕಾರಿ, ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.