ನೈಟಿ ಹಾಕೊಂಡವರನ್ನು ಕಂಡರೆ ನೈಂಟಿ ಹಾಕಿದಾಗುತ್ತಂತೆ. ಅಜಯ್ ರಾವ್‌ಗೆ ಕಿಕ್ ಏರಿದಂತಾಗುತ್ತದಂತೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಐಟಂ ಸಾಂಗ್ ವೀಕ್ಷಕರ ಕಿಕ್ ಏರಿಸಿದೆ.
ನಟ ಅಜಯ್ ರಾವ್ ಮತ್ತು ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಅದರ ಐಟಂ ಸಾಂಗ್ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಅಜಯ ರಾವ್, ಚಿಕ್ಕಣ್ಣ ಮತ್ತು ಲಾಸ್ಯ ಸಹಿತ ಹಲವರು ಈ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್ ಅನಾವರಣ ಗೊಂಡ ಕೆಲವೇ ದಿನಗಳಲ್ಲಿ ಮಿಲಿಯಗಟ್ಟಲೆ ನೆಟ್ಟಿಗರ ಗಮನಕೇಂದ್ರೀಕರಿಸಿದೆ.