ಕೊಪ್ಪಳ: ಕೆಆರ್‌ಐಡಿಎಲ್ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್) ಹಗರಣ ಬಗ್ಗೆ ಕೊಪ್ಪಳದಲ್ಲಿ ದೂರು ಪ್ರತಿಧ್ವನಿಸುತ್ತಿದ್ದಂತೆಯೇ, ಅಂತಹಾ ಹಗರಣಗಳು ಎಲ್ಲಾ ಜಿಲ್ಲೆಗಳಲ್ಲೂ ಅಕ್ರಮ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೆಆರ್‌ಐಡಿಎಲ್ ಅಕ್ರಮದ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಕೊಪ್ಪಳ ಕೆಆರ್‌ಐಡಿಎಲ್ ನಲ್ಲಿ ನಡೆದ ಅಕ್ರಮಗಳ ಕುರಿತ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 72 ಕೋಟಿ ರೂ. ಮೌಲ್ಯದ ಕೆಲಸಗಳು ಕಾರ್ಯಗತವಾಗದಿದ್ದರೂ ಬಿಲ್‌ಗಳನ್ನು ಪಾವತಿಸಲಾಗಿದೆ ಎಂದು ಹೇಳಿದರು. ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಹಗರಣಗಳು ನಡೆಯುತ್ತಿದ್ದು, ಬಿಜೆಪಿ ಈ ವಿಷಯಗಳನ್ನು ಪ್ರಸ್ತಾಪಿಸಿ ಹೋರಾಡಲಿದೆ ಎಂದು ಹೇಳಿದರು.