ಮಂಗಳೂರು : ನಗರದ ಕೊಂಚಾಡಿ ಕ್ಷೇತ್ರದಲ್ಲಿರುವ ಶ್ರೀ ಕಾಶಿ ಮಠ ಸಂಸ್ಥಾನದ ಶಾಖಾ ಮಠದಲ್ಲಿ ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮೊಕ್ಕಾಂನಲ್ಲಿದ್ದು ಈ ಪ್ರಯುಕ್ತ ಶ್ರೀ ದೇವಳದಲ್ಲಿ ‘ಚಂಡಿಕಾ ಹವನ’ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಜರಗಿತು. ಪ್ರಾತಃ ಕಾಲ ಸಂಸ್ಥಾನದ ದೇವರ ನೈರ್ಮಾಲ್ಯ ಪೂಜೆ ನಡೆದ ಬಳಿಕ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವರಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು.
ಈ ಸಂದರ್ಭದಲ್ಲಿ ವೇದ ಮೂರ್ತಿ ಎಚ್.ಯೋಗೀಶ್ ಭಟ್, ಸತೀಶ್ ಪೈ, ಶಾಖಾ ಮಠದ ವ್ಯವಸ್ಥಾಪಕ ಸಮಿತಿಯ ಡಿ.ವಾಸುದೇವ ಕಾಮತ್, ಜಿ.ರತ್ನಾಕರ್ ಕಾಮತ್, ಶಶಿಧರ್ ಪೈ ಮಾರೂರ್, ಸೂರಜ್ ಕಾಮತ್, ದೀಪಕ್ ಕುಡ್ವ, ಪ್ರಶಾಂತ್ ಪೈ, ಅನಿಲ್ ಕಾಮತ್ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು.