ಬೆಂಗಳೂರು: ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಮಾಜಿ ಸಚಿವರಾದ ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆ ವಿರುದ್ಧ ಕಿಸಾನ್ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಕರ್ನಾಟಕ ಪ್ರದೇಶ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚನ್ ಮಿಗಾ, ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆನ್ನಲಾದ ಬಿಜೆಪಿ ನಾಯಕರಾದ ಸಿ.ಟಿ.ರವಿ ಹಾಗೂ ಶೋಭಾ ಕರಂದ್ಲಾಜೆಯವರ ಬಗ್ಗೆ ಕಟು ಟೀಕೆ ಮಾಡಿದ್ದಾರೆ.ಈ ಬಿಜೆಪಿ ನಾಯಕರು ನಕಲಿ ಹಿಂದುತ್ವದ ಹೆಸರಿನ ಲ್ಲಿ ರಾಜಕೀಯ ಮಾಡಿ ಹಿಂದುಗಳನ್ನು ಪ್ರಚೋದಿಸಿ ಶಾಸಕ, ಸಂಸದರಾಗಿ ಆಯ್ಕೆಯಾದವರು ಎಂದು ಸಚಿನ್ ಮಿಗಾ ಟೀಕಿಸಿದ್ದಾರೆ.
ಬಿಜೆಪಿಯ ಶೋಭಾ ಕರಂದ್ಲಾಜೆ ಹಾಗೂ ಸಿ.ಟಿ.ರವಿಯವರು ತಮ್ಮ ರಾಜಕೀಯ ಜೇವನದುದ್ದಕ್ಕೂ ರೈತರ ವಿಚಾರವಾಗಿ ಹೋರಾಟ ನೆಡೆಸಿದ ಉದಹಾರಣೆಗಲಿಲ್ಲ. ಕೇವಲ ನಕಲಿ ಹಿಂದುತ್ವದ ಹೋರಾಟ ಮಾಡಿ ಹಿಂದುಗಳಿಗೆ ದ್ರೋಹವೆಸಗ್ಗಿದ್ದಾರೆ. ಈಗ ದೇಶದ ರೈತರ ಹೋರಾಟವನ್ನು ಕಲಿಸ್ತಾನ್ ಬೆಂಬಲಿಸುತ್ತಿದೆ, ಭಯೋತ್ಪಾದನ ಸಂಘಟನೆಗಳು ರೈತರ ಹೋರಾಟದ ಹಿಂದೆ ಇದೆ ಎಂದು ಹೇಳುವ ಮೂಲಕ ರೈತ ಕುಲಕ್ಕೆ ದ್ರೋಹವೆಸಗಿದ್ದಾರೆ ಎಂದು ಸಚಿನ್ ಮಿಗಾ ದೂರಿದ್ಧಾರೆ. ಈ ಕೂಡಲೇ ಈ ನಕಲಿ ಹಿಂದೂ ನಾಯಕರನ್ನು ಗಡಿಪಾರು ಮಾಡುವಂತೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಗ್ರಹಿಸುತ್ತದೆ ಎಂದವರು ಹೇಳಿದ್ದಾರೆ.
https://m.facebook.com/story.php?story_fbid=3254768204631857&id=100002961282240