ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು.
‘ಪ್ರಗತಿಯ ಪ್ರತಿಮೆ’ ಎಂದೇ ಗುರುತಿಸಲಾಗಿರುವ ಕೆಂಪೇಗೌಡ ಅವರ ಪ್ರತಿಮೆ 108 ಅಡು ಎತ್ತರವಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸಿದರು.
Live : ಪ್ರಧಾನಿ ಶ್ರೀ @narendramodi ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ#KarnatakaWelcomesModi #ಬನ್ನಿನಾಡಕಟ್ಟೋಣ #StatueofProsperity https://t.co/TNOCOUgaOT
— BJP Karnataka (@BJP4Karnataka) November 11, 2022
ಬೆಂಗಳೂರು ನಗರ ನಿರ್ಮಾತೃ ಎಂದೇ ಗುರುತಾಗಿರುವ ಇತಿಹಾಸ ಪುರುಷನ ಈ ಭವ್ಯ ಪ್ರತಿಮೆ ಮೂಲಕ ಉದ್ಯಾನ ನಗರಿ ಇದೀಗ ಮತ್ತೆ ಜಗತ್ತಿನ ಗಮನಸೆಳೆದಿದೆ. ‘ಪ್ರಗತಿಯ ಪ್ರತಿಮೆ’: ಎಂದೇ ಬಿಂಬಿತವಾಗಿರುವ ಕೆಂಪೇಗೌಡ ಪ್ರತಿಮೆ ಅನಾವರಣವು ಬೆಂಗಳೂರು ಅಭ್ಯದಯದ ಪರ್ವಕ್ಕೆ ಮುನ್ನುಡಿಯಾಗಲಿದೆ ಎಂಬ ನಿರೀಕ್ಷೆ ಉದ್ಯಾನನಗರಿಯ ಜನರದ್ದು. ಇದೀಗ ಈ ಪ್ರಗತಿಯ ಹಾದಿಯತ್ತ ಪ್ರಧಾನಿ ಬೊಟ್ಟು ಮಾಡಿದ್ದಾರೆ.