ಕೋಲಾರ: ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಹೋಬಳಿಯ ರಾಮಸಾಗರ, ಸುಂದರಪಾಳ್ಯ, N G ಹುಲ್ಗೂರ್ ಕ್ಲಸ್ಟರ್ ಗಳ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಶನ್ ವತಿಯಿಂದ ಅವೇರ್ನೆಸ್ ವರ್ಕ್ ಶಾಪ್ ಫಾರ್ ಸ್ಕೂಲ್ ಟೀಚರ್ಸ್ ಯೂಸಿಂಗ್ ಲೋ ಕಾಸ್ಟ್ ಟೀಚಿಂಗ್ Aids ಟು ಇಂಪ್ರೂ ಸೈನ್ಸ್ ಟೆಕ್ನಾಲಜಿ ವತಿಯಿಂದ ರಾಮಸಾಗರ ಕ್ಲಸ್ಟರ್ ನ ಕೆಜಿಬಿವಿ ಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯಗಳ ಕಿಟ್ ಗಳನ್ನು ವಿತರಿಸುವ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು
ಕೆಸಿ ರೆಡ್ಡಿ ಸರೋಜಮ್ಮ ವೆಲ್ಫೇರ್ ವತಿಯಿಂದ ಆಗಮಿಸಿದ ಶ್ರೀಮತಿ ವಸಂತ ಕವಿತಾ ರವರು ಮಾತನಾಡಿ, ಇಂದಿನ ಜ್ಞಾನಾಧಾರಿತ ವಿಜ್ಞಾನ ಮತ್ತು ತಂತ್ರಜ್ಞಾನವು ಬೆಳವಣಿಗೆ ಮತ್ತು ಅಭಿವೃದ್ಧಿಯ ಬಹು ಶಕ್ತಿಯುತ ಚಾಲನಾಶಕ್ತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವು, ಬಹುತೇಕ ತಂತ್ರಜ್ಞಾನ ಅಭಿವೃದ್ಧಿಯ ಮೂಲಕ, ನಾವು ಬದುಕುವ ರೀತಿಯ ಮೇಲೆ ಅಗಾಧ ಪರಿಣಾಮವನ್ನು ಉಂಟು ಮಾಡಿದ್ದು, ನಮ್ಮ ದೈನಂದಿನ ಜನಜೀವನವನ್ನು ಉತ್ತಮ ಹಾಗೂ ಸುಲಭಪಡಿಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆ ಅನನ್ಯವಾಗಿದೆ. ಆದುದರಿಂದ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯು ಶಾಲಾ ಮಟ್ಟದಲ್ಲಿಯೆ ವಿದ್ಯಾರ್ಥಿಗಳಿಗೆ ಪರಿಚಯಿಸುವುದು ಅತಿ ಮುಖ್ಯವಾಗಿಿದ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಭಿವೃದ್ಧಿಯ ಎಲ್ಲಾ ರಂಗಗಳಲ್ಲೂ ಮುಖ್ಯವಾಹಿನಿಗೆ ತರುವುದು ಅವಶ್ಯವಿದ್ದು, ವೈಜ್ಞಾನಿಕ ಮುನ್ನಡೆ ಮತ್ತು ತಂತ್ರಜ್ಞಾನದ ಆವಿಷ್ಕಾರಗಳನ್ನು ಸಮಾಜದ ಒಳಿತಿಗಾಗಿ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಳಸಿಕೊಳ್ಳುವಂತಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಕ್ಲಸ್ಟರ್ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಯೋಗದ ಚಟುವಟಿಕೆಗಳನ್ನು ಮಾಡಿ ಗಮನಸೆಳೆದರು.
ಕೆಜಿಎಫ್ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮಾತನಾಡಿ, ವಿಜ್ಞಾನದ ಪ್ರತಿಯೊಂದು ವಿಭಾಗಲ್ಲಿಯೂ ಜ್ಞಾನದ ಸೀಮೆಗಳು ಹಿಂದೆಂದೂ ಕಂಡರಿಯದ ವೇಗದಲ್ಲಿ ಚಲಿಸುತ್ತಿವೆ. ಪ್ರತಿಯೊಂದು ಅಭಿವೃದ್ಧಿಗೆ ವಿಜ್ಞಾನವೇ ಅಡಿಪಾಯ ಆದ್ದರಿಂದ ಶಾಲಾ ಹಂತದಲ್ಲಿ ಅದರಲ್ಲಿ ಕಿರಿಯ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಅರಿವು ಮೂಡಿಸುವುದು ಶಿಕ್ಷಕರ ಜವಾಬ್ದಾರಿ ಈ ನಿಟ್ಟಿನಲ್ಲಿ ತಾವೆಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು. ಶಾಲಾ ಶಿಕ್ಷಕರಿಗೆ ವಿಜ್ಞಾನದ ಕಿಟ್ ಗಳನ್ನು ವಿತರಿಸಿದರು
ಈ ಒಂದು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕ್ಷೇತ್ರ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ECO, ಗಂಗಿರೆಡ್ಡಿ BRP ನಾಗರಾಜ್ ಸರ್ಕಾರಿ ನೌಕರರ ಜಂಟಿ ಕಾರ್ಯದರ್ಶಿ ಗೆನ್ನೇರಹಳ್ಳಿ ಶ್ರೀನಿವಾಸ್ ಮೂರ್ತಿ ಎನ್. ಜಿ ಹುಲ್ಗೂರ್ ಸಿಆರ್ಪಿ ರಂಜಿತ್ ಸುಂದರಪಾಳ್ಯ ಸಿಆರ್ಪಿ ಸುರಪ್ಪ ರಾಮಸಾಗರ ಸಿಆರ್ ಪಿ ಮಾರ್ತಿ ಎಲ್ಲಾ ಕ್ಲಸ್ಟರ್ ನ ಮುಖ್ಯ ಶಿಕ್ಷಕರು ಹಾಜರಿದ್ದರು