ಬೆಂಗಳೂರು: ರಾಜ್ಯ ವಿಧಾನಸಭಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ನಡುವೆ ಭರ್ಜರಿ ಜಂಗೀಕುಸ್ತಿ ನಡೆದಿದೆ. ಬುಧವಾರ ಮತದಾನ ನಡೆದಿದ್ದು ಇದೀಗ ಸೋಲು-ಗೆಲುವಿನ ಲೆಕ್ಕಾಚಾರ ಸಾಗಿದೆ.
ಈ ವರೆಗೂ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಹಾಗೂ ಚುನಾವಣಾ ಪೂರ್ವ ಸಮೀಕ್ಷೆಗಳ ಬಗ್ಗೆ ಜನರ ಚಿತ್ತ ನೆಟ್ಟಿತ್ತು. ಆದರೆ ಇದೀಗ ನತದಾನ ಪ್ರಕ್ರಿಯೆಯೇ ಪೂರ್ಣಗೊಂಡಿದ್ದು ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಬಗೆಬಗೆಯ ಲೆಕ್ಕಾಚಾರಗಳಿಗೆ ಮುನ್ಬುಡಿ ಬರೆದಿದ್ದವು. ಎಬಿಪಿ-ಸಿ-ಓಟರ್, ಲೋಕಪಾಲ್, ಇಂಡಿಯಾ ಟಿವಿ, ಸೌತ್ ಫಸ್ಟ್ ಮೊದಲಾದ ಪ್ರಮುಖ ಸಂಸ್ಥೆಗಳು ಮತದಾನ ಪೂರ್ವದಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಸಿಗುವ ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿತದ್ದವು. ಅದೇ ವೇಳೆ, ನ್ಯೂಸ್ 18, ಏಷಿಯಾನೆಟ್, ಜೀ ಟಿವಿ ಸಹಿತ ಕೆಲವು ಸಙಸ್ಥೆಗಳು ಬಿಜೆಪಿಯೇ ಗೆದ್ದು ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಗಳತ್ತ ಬೊಟ್ಟು ಮಾಡಿದ್ದವು. ಆದರೆ, ಮತದಾರರ ಗುಟ್ಟು ರಟ್ಟಾಗದೆ ಮತಯಂತ್ರ ಸೇರಿದ್ದು, ಸ್ಪಷ್ಟ ಫಲಿತಾಂಶ ಮೇ 13ರಂದು ಲಬ್ಯವಾಗಲಿದೆ.
ಈ ನಡುವೆ, ಮತದಾನ ಮುಗಿಯುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗತೊಡಗಿವೆ. ವಿವಿಧ ಸಂಸ್ಥೆಗಳ ಸಮೀಕ್ಷೆಗಳು ಸೋಲು-ಗೆಲುವಿನ ಲೆಕ್ಕಾಚಾರಗಳಿಗೆ ರೋಚಕತೆ ತುಂಬಿವೆ.
ಟಿವಿ9-ಸಿ ಪೋಲ್ ಸ್ಟರ್ಟ್:
ಟಿವಿ9-ಸಿ ಪೋಲ್ ಸ್ಟರ್ಟ್ ನಡೆಸಿರುವ ಮತದಾನೋತ್ತರ ಸಮೀಕ್ಷೆಯಲ್ಲಿ ಅತಂತ್ರ ವಿಧಾನಸಭೆಯ ಸಾಧ್ಯತೆಗಳು ವ್ಯಕ್ತವಾಗಿವೆ. BJP-88-98, ಕಾಂಗ್ರೆಸ್: 99-109, ಜೆಡಿಎಸ್: 21-26, ಇತರರು: 00-04 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ಈ ಸಮೀಕ್ಷೆ ಹೇಳಿವೆ.
ಸಿ-ಓಟರ್
ಟಿವಿ9-ಸಿಓಟರ್ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ಬಿಜೆಪಿ: 83-95, ಕಾಂಗ್ರೆಸ್: 100-112, ಜೆಡಿಎಸ್: 21-29, ಇತರರು 02-06 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
ರಿಪಬ್ಲಿಕ್ ಟಿವಿ ಸಮೀಕ್ಷೆ:
ಬಿಜೆಪಿ: 85-100, ಕಾಂಗ್ರೆಸ್: 94-108, ಜೆಡಿಎಸ್: 24-32 ಇತರರು :00-06
ZEE MATRIZE ಸಮೀಕ್ಷೆ:
ಬಿಜೆಪಿ: 79-94 ಕಾಂಗ್ರೆಸ್: 103-118, ಜೆಡಿಎಸ್: 25-23 ಇತರರು: 02-05
JANN KI BAAT ಸಮೀಕ್ಷೆ:
ಬಿಜೆಪಿ: 106 ಕಾಂಗ್ರೆಸ್: 99, ಜೆಡಿಎಸ್: 19
ನ್ಯೂಸ್ ನೇಷನ್ ಸಮೀಕ್ಷೆ:
ಬಿಜೆಪಿ: 114 ಕಾಂಗ್ರೆಸ್: 86, ಜೆಡಿಎಸ್: 21 ಇತರರು: 03
P-MARQ ಸಮೀಕ್ಷೆ:
ಬಿಜೆಪಿ: 85-100 ಕಾಂಗ್ರೆಸ್: 94-108, ಜೆಡಿಎಸ್: 24-32 ಇತರರು 02-06
BHARTHVARSH ಸಮೀಕ್ಷೆ:
ಬಿಜೆಪಿ: 88-98 ಕಾಂಗ್ರೆಸ್: 99-109, ಜೆಡಿಎಸ್: 21-26 ಇತರರು: 00-04