ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಮಹಾಸಮರಕ್ಕೆ ತೆರೆಬಿದ್ದಿದೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಇಂದು ಮತದಾನ ನಡೆದಿದ್ದು, ಇನ್ನೇನಿದ್ದರೂ ಫಲಿತಾಂಶವಷ್ಟೇ ಬಾಕಿ.
ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. 224 ಕ್ಷೇತ್ರಗಳಲ್ಲಿ ಒಟ್ಟು 2615 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ ಹಲವೆಡೆ ಶೇ.75ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಕೆಲವೆಡೆ ಮತದಾನ ಸಂದರ್ಭದಲ್ಲಿ ಗಲಾಟೆಗಳು ನಡೆದಿದ್ದನ್ನು ಹೊರತುಪಡಿಸಿದರೆ ಈ ಬಾರಿಯ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಒಟ್ಟು 58, 282 ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಈ ಪೈಕಿ 11,617 ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದೆ.
ಒಟ್ಟು ವಿಧಾನಸಭಾ ಕ್ಷೇತ್ರಗಳು- 224
ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು- 2615
ಬಿಜೆಪಿ – 224
ಕಾಂಗ್ರೆಸ್ – 223
ಜೆಡಿಎಸ್ – 209
ಎಎಪಿ- 209
ಬಿಎಸ್ ಪಿ- 133
ಸಿಪಿಐಎಂ- 04
ನೋಂದಾಯಿತ ಪಕ್ಷಗಳು- 254
ಪಕ್ಷೇತರರು- 918
ಪುರುಷರು- 2430
ಮಹಿಳೆಯರು- 184
ತೃತೀಯ ಲಿಂಗಿ- 01