ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಗಡುವು ಮುಕ್ತಾಯಗೊಳ್ಳುವ ಕೆಲವೇ ತಾಸುಗಳ ಮುನ್ನ ಕಾಂಗ್ರೆಸ್ ಪಕ್ಷ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐದು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದು ಹಲವೆಡೆ ಕೆಲವೆಡೆ ಅಚ್ಚರಿಯ ಹೆಸರುಗಳು ಇವೆ.
ಅಭ್ಯರ್ಥಿಗಳ ಪಟ್ಟಿ ಹೀಗಿದೆ:
- ಶಿಡ್ಲಘಟ್ಟ: ಬಿ ವಿ ರಾಜೀವ್ ಗೌಡ
- ಸಿವಿ ರಾಮನ್ ನಗರ: ಎಸ್ ಆನಂದಕುಮಾರ್
- ರಾಯಚೂರು ನಗರ: ಮೊಹಮದ್ ಶಲಾಮ್
- ಅರಕಲಗೂಡು: ಹೆಚ್ ಪಿ ಶ್ರೀಧರ್ ಗೌಡ
- ಮಂಗಳೂರು ಉತ್ತರ: ಇನಾಯತ್ ಅಲಿ