ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಮಂಗಳೂರಿನ ನೆಹರೂ ಮೈದಾನದಲ್ಲಿ 5ನೇ ವರ್ಷದ ಸೆಲೆಬ್ರಿಟಿ ಸಿಪಿಎಲ್ ಕ್ರಿಕೆಟ್ ಪಂದ್ಯಾಟ ನಡೆಯಿತು.
ಮಾರ್ಚ್ 17ರಿಂದ 21ರ ವರೆಗೆ ನಡೆದ ಪಂದ್ಯದಲ್ಲಿ 8 ಕಲಾವಿದ ತಂತ್ರಜ್ಞರ ತಂಡ ಭಾಗವಹಿಸಿತ್ತು. ಭಾನುವಾರ ನಡೆದ ಪೈನಲ್ ನಲ್ಲಿ ಸ್ವರೂಪ್ ಶೆಟ್ಟಿ ಮಾಲೀಕತ್ವದ ಅರ್ಜುನ್ ಕಾಪಿಕಾಡ್ ನಾಯಕತ್ವದ ಕರಾವಳಿ ವಾರಿಯರ್ಸ್ ಹಾಗೂ ವೆಂಕಟೇಶ್ ಪ್ರಭು ಮಾಲಿಕತ್ವದ ಸಂದೀಪ್ ಭಕ್ತ ನಾಯಕತ್ವದ ವಿಜಯಲಕ್ಷ್ಮಿ ವೀರಾಸ್ ಮುಖಾಮುಖಿಯಾಗಿ ಕರಾವಳಿ ವಾರಿಯರ್ಸ್ ಪ್ರಥಮ ಟ್ರೋಪಿ ಹಾಗೂ 75,000 ನಗದು. ಹಾಗೂ ವಿಜಯಲಕ್ಷ್ಮಿ ವೀರಾಸ್ ದ್ವಿತೀಯ ಟ್ರೋಪಿ ಹಾಗೂ 50,000 ನಗದು ಪ್ರಶಸ್ತಿಯನ್ನು ತನ್ನ ದಾಗಿಸಿಕೊಂಡವು.
ವೈಯಕ್ತಿಕವಾಗಿ ಕರಾವಳಿ ವಾರಿಯರ್ಸ್ ತಂಡದ ಸಚಿನ್ ಶೆಟ್ಟಿ ಸರಣಿ ಪುರುಷೋತ್ತಮ ಪ್ರಶಸ್ತಿ ಹಾಗೂ ಆರೆಂಜ್ ಕ್ಯಾಪ್ ಪ್ರಶಸ್ತಿ ಪಡೆದರೆ ಅದೇ ತಂಡದ ಶುಭಂ ಕುಲಾಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಚಾಲೆಂಜಿಂಗ್ ಸ್ಟಾರ್ ತಂಡದ ಸಂತೋಷ್ ಕಡಂದಲೆ ಪರ್ಪಲ್ ಕ್ಯಾಪ್ ಪ್ರಶಸ್ತಿ ಪಡೆದರು.
ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮಾಜಿ ಮೇಯರ್ ಮಹಾಬಲ ಮಾರ್ಲ, ಮಂಗಳೂರು ಸಂಚಾರಿ ಪೋಲಿಸ್ ಎ.ಸಿ.ಪಿ ನಟರಾಜ್, ಕೆಎಂಎಫ್ ಮಾರ್ಕೆಟಿಂಗ್ ಮ್ಯಾನೇಜರ್ ರವಿ, ಕಾಂಚನ ಮೋಟರ್ಸ್ ಕಶ್ಯಪ್ ಹೆಬ್ಬಾರ್, ಡೀಲ್ ಬಡಿ ಎಂಡಿ ಶಾಹಿದ್, ಉಧ್ಯಮಿ ಪ್ರಿಯಾಂಕ ಅಶ್ವಿನ್, ನಿರ್ಮಾಪಕಿ ಶರ್ಮಿಳಾ ಕಾಪಿಕಾಡ್, ನಿರ್ಮಾಪಕರಾದ ಆನಂದ್ ಕುಂಪಲ, ಹರೀಶ್ ಶೆರಿಗಾರ್, ಗೌರವಾಧ್ಯಕ್ಷರು ಕಿಶೋರ್ ಡಿ ಶೆಟ್ಟಿ, ಅಧ್ಯಕ್ಷರು ಮೋಹನ ಕೊಪ್ಪಳ ಕದ್ರಿ, ಉಪಾಧ್ಯಕ್ಷ ಸುಹಾನ್ ಪ್ರಸಾದ್, ಕೋಶಾಧಿಕಾರಿ ವಿಶ್ವಾಸ್ ಗುರುಪುರ, ಗೋಕುಲ್ ಕದ್ರಿ, ಸ್ಥಾಪಕಾಧ್ಯಕ್ಷೆ ಅಶ್ವಿನಿ ಪ್ರಕಾಶ್ ಶೆಟ್ಟಿ, ವಕೀಲರು ಮೊಹನದಾಸ್ ರೈ, ಪ್ರಜ್ವಲ್ ಅತ್ತಾವರ, ವಿನಾಯಕ್ ಜಪ್ಪು, ರಾಜೇಶ್ ಸ್ಕೈಲಾರ್ಕ್, ಎಂಟು ತಂಡಗಳ ಮಾಲಕರು, ನಾಯಕರು, ಲಕ್ಷ್ಮೀಷ್ ಸುವರ್ಣ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.