‘ಭೋಜರಾಜ್ ..’ ಚಿತ್ರದಲ್ಲಿ ಕಾಪಿಕಾಡ್- ಕೊಡಿಯಾಲ್ ಬೈಲ್ ಮೋಡಿ..ಹಿಂದೆ ‘ಹಾವು-ಮುಂಗುಸಿ’ಯಂತಿದ್ದ ಈ ಇಬ್ಬರು ದಿಗ್ಗಜ ಕಲಾವಿದರು ಇದೀಗ ಸಮ್ಮಿತ್ರರಾಗಿ ಗಮನಸೆಳೆದಿದ್ದಾರೆ. ಇದಕ್ಕೆ ವೇದಿಕೆಯಾಗಿರುವುದು ‘ಭೋಜರಾಜ್ MBBS..
ಕೊರೊನಾ ಕಾರಣದಿಂದ ಕಳೆದ ಒಂದು ವರ್ಷಗಳಿಂದ ಸ್ಥಗಿತಗೊಂಡಿದ್ದ ತುಳು ಚಿತ್ರಪ್ರೇಮಿಗಳ ಬಹು ನಿರೀಕ್ಷೆಯ ‘ಭೋಜರಾಜ್ ಎಂ.ಬಿ.ಬಿ.ಎಸ್ ಚಿತ್ರ ಇದೀಗ ಮತ್ತೆ ಕುತೂಹಲಕಾರಿ ವಿಚಾರಗಳೊಂದಿಗೆ ಸುದ್ದಿಯ ಮುನ್ನಲೆಗೆ ಬಂದಿದೆ.
ಈ ಚಿತ್ರದ ಮೂಲಕ ತುಳು ರಂಗಭೂಮಿ ಹಾಗೂ ಚಿತ್ರರಂಗದ ಇಬ್ಬರೂ ಮಹಾನ್ ಕಲಾವಿದರು ಪ್ರಥಮಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣದಲ್ಲಿ ಭಾಗವಹಿಸಿದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇದೀಗ ಹಂತಿಮ ಹಂತದ ಚಿತ್ರಕರಣದಲ್ಲಿ ತೇಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಜೊತೆ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇವರು ಹಾಸ್ಯಪಾತ್ರದಲ್ಲಿ ಮಿಂಚಲಿದ್ದಾರೆ.
ಭೋಜರಾಜ್ ವಾಮಂಜೂರು ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರದಲ್ಲಿ ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್ ಮೂರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಣ್ಣ ಬಣ್ಣದ ಬದುಕು ಖ್ಯಾತಿಯ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರು ತುಳು ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಸಾಯಿಕೃಷ್ಣ ಕುಡ್ಲ, ಉಮೇಶ್ ಮಿಜಾರ್, ರವಿರಾಮಕುಂಜ ,ರೋನ್ಸ್ ಲಂಡನ್, ಪರ್ವೇಜ್ ಚೆನ್ನೈ, ಪ್ರಾಣ್ ಶೆಟ್ಟಿ ಮಾ.ದನ್ವಿತ್ ಸುವರ್ಣ, ಸುಜಾತ ಶಕ್ತಿನಗರ, ಪ್ರಭಾ ಸುವರ್ಣ ಕೂಡಾ ಅಭಿನಯಿಸಿದ್ದಾರೆ .ಶೀತಲ್ ನಾಯಕ್ ಮತ್ತು ನವ್ಯ ಪೂಜಾರಿ ನಾಯಕಿಯರಾಗಿ ನಟಿಸುತ್ತಿದ್ದು ಸದ್ಯದಲ್ಲೇ ಈ ಸಿನಿಮಾ ತೆರೆಕಾಣಲಿದೆ.