ದೆಹಲಿ: ಟೋಕಿಯೋದಲ್ಲಿ ನಡೆಯುತ್ತಿರಯ ಪ್ಯಾರಾಲಿಂಪಿಕ್‌ನಲ್ಲಿ ಕನ್ನಡಿಗನೊಬ್ಬ ಬೆಳ್ಳಿ ಪದಕ ಗೆದ್ದು ಬೀಗಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ‘ಸುಹಾಸ್ ಯತಿರಾಜ್’ ಫೈನಲ್‌ನಲ್ಲಿ ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ದ ಸರಣಸಾಡಬೇಕಾಯಿತು. ಅಲ್ಪ ಅಂತರದಿಂದ ಚಿನ್ನ ಗಲ್ಲುವಲ್ಲಜ ಸಫಲರಾಗದಿದ್ದರೂ ಎರಡನೇ ಸ್ಥಾನ ಪಡೆದು ಜಗತ್ತಿನ ಗಮನಸೆಳೆದರು.
ಎಸ್‌ಎಲ್-4 ಸೆಮಿಫೈನಲ್‌ನಲ್ಲಿ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ದ 21-9, 21-15ರ ಅಂತರದಲ್ಲಿ ಗೆದ್ದಿದ್ದ ಸುಹಾಸ್, ಫೈನಲ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ದ ಸರಣಸಾಡಬೇಕಾಯಿತು. ಈ ರೋಚಕ ಹಣಾಹಣಿಯಲ್ಲಿ ಸುಹಾಸ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
What. A. Match 🤯#FRA's Lucas Mazur and #IND's Suhas Yathiraj served up a true classic in the #ParaBadminton Men's Singles SL4 Final. 🔥 #Gold #Silver #Tokyo2020 #Paralympics pic.twitter.com/jUjC8QqboA
— Olympic Khel (@OlympicKhel) September 5, 2021
ಭಾರತದ ಪರ ಬೆಳ್ಳಿ ಗೆದ್ದ ಸುಹಾಸ್ ಯತಿರಾಜ್ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸಹಿತ ಗಣ್ಯರನೇಕರು ಶುಭ ಹಾರೈಸಿದ್ದಾರೆ.
Congratulations to Suhas Yathiraj who gave a tough fight to world #1 and won silver medal in badminton at #Paralympics. Your dedication in pursuing sports while discharging duties as a civil servant is exceptional. Best wishes for a future full of accomplishments.
— President of India (@rashtrapatibhvn) September 5, 2021