ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ ಹೊಸ ಸಿನಿಮಾ ಶೂಟಿಂಗ್ ಆಗಸ್ಟ್ ತಿಂಗಳಿನಿಂದ ವೇಗ ಪಡೆಯಲಿದೆ. ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ ಹೊಸ ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಶೀರ್ಷಿಕೆ ಇಡಲಾಗಿದೆಯಂತೆ. ತೆಲುಗು ಮಾತ್ರವಲ್ಲ, ಕನ್ನಡ, ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆ ಆಗಲಿದೆಯಂತೆ.
ಟಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವೀ ಮೇಕರ್ಸ್’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಜೂನಿಯರ್ ಎನ್ಟಿಆರ್ ಅವರಿಗೆ ಜನ್ಮದಿನದ ಶುಭಾಶಯ ತಿಳಿಸಿದ ಸಂದರ್ಭದಲ್ಲಿ ಹೊಸ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
Happy Birthday to the ‘MAN OF MASSES’ @tarak9999 ❤🔥
-Team #NTRNeel
Shoot begins from August 2024.
Brace yourself for a powerhouse project 🔥#HappyBirthdayNTR#PrashanthNeel @NTRArtsOfficial pic.twitter.com/UcXsyzKVhd
— Mythri Movie Makers (@MythriOfficial) May 20, 2024
‘ಮ್ಯಾನ್ ಆಫ್ ಮಾಸಸ್ ಜೂನಿಯರ್ ಎನ್ಟಿಆರ್ ಅವರಿಗೆ ಹ್ಯಾಪಿ ಬರ್ತ್ಡೇ. 2024ರ ಆಗಸ್ಟ್ನಿಂದ ಶೂಟಿಂಗ್ ಆರಂಭ ಆಗಲಿದೆ. ಪವರ್ಹೌಸ್ ಪ್ರಾಜೆಕ್ಟ್ಗಾಗಿ ಸಿದ್ಧರಾಗಿ’ ಎಂದು ಪೋಸ್ಟ್ ಹಾಕಲಾಗಿದೆ.