ಬೆಳಗಾವಿ: ಜೆಡಿಎಸ್ ನೇತೃತ್ವದಲ್ಲಿ ನಡೆಯುತ್ತಿರುವ ಜನತಾ ಜಲಧಾರೆ ಯಾತ್ರೆ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ.
ಇಂದು ಬಾಗೇವಾಡಿಗೆ ಆಗಮಿಸಿದ ಜನತಾ ಜಲಧಾರೆ ರಥವನ್ನು ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ ಹಾಗೂ. ಬಾಗೇವಾಡಿ ಜೆಡಿಎಸ್ ಅಧ್ಯಕ್ಷರಾದ ರಾಜು ರೊಟ್ಟಿ ಸಹಿತ ಮುಖಂಡರನೇಕರು ಸ್ವಾಗತಿಸಿದರು.
ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜರುದ್ದಿನ್ ಪನಾಲಗಡ್ ಹಾಗೂ ಅನೇಕ ಕಾರ್ಯಕರ್ತರು ಕೂಡಾ ಸ್ವಾಗತಿಸಿ ಪೂಜೆ ಸಲ್ಲಿಸಿದರು. ಜನತಾ ಜಲಧಾರೆ ಯಾತ್ರೆ ಬಾಗೇವಾಡಿ ತಲುಪುತ್ತಿದ್ದಂತೆಯೇ ಜೆಡಿಎಸ್ ಕಾರ್ಯಕರ್ತರು ಜಯಘೋಷ ಮೊಳಗಿಸಿದರು.
























































