ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಳೆದೈದು ವರ್ಷ ಪ್ರತಿಪಕ್ಸ ಸ್ಥಾನದಲ್ಲಿದ್ದ ಕಾಂಗ್ರೆಸ್ ಈ ಬಾರಿ ಗೆದ್ದು ಬೀಗಿದೆ. ಈ ನಡುವೆ ಜಯನಗರ ಕ್ಷೇತ್ರದ ಫಲಿತಾಂಶ ಗೊಂದಲದ ಗೂಡಾಗಿ ಪರಿಣಮಿಸಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಮತಣಿಕೆ ಶನಿವಾರವೇ ನಡೆದು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಬಿಜೆಪಿಯ ರಾಮಮೂರ್ತಿ ವಿರುದ್ದ 294 ಮತಗಳಿಂದ ಜಯಗಳಿಸಿದ್ದಾರೆಂದು ಘೋಷಿಸಲಾಗಿತ್ತು. ಆದರೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆಕ್ಷೇಪಿಸಿರುವ ಬಿಜೆಪಿ ನಾಯಕರು ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮತ್ತೊಮ್ಮೆ ಎಣಿಕೆ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮರು ಮತ ಎಣಿಕೆ ನಂತರ ಬಿಜೆಪಿ ಹುರಿಯಾಳು ರಾಮಮೂರ್ತಿ ಅವರಿಗೆ 17 ಮತಗಳ ಮುನ್ನಡೆ ಸಾಧಿಸಿದ್ದು ಅಂತಿಮವಾಗಿ ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಘೋಷಿಸಲು ಅಧಿಕಾರಿಗಳು ಮುಂದಾದರೆನ್ನಲಾಗಿದೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಸಹಿತ ಹಲವರು ಪ್ರತಿರೋಧ ಒಡ್ಡಿದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಗಿದೆ.
BJP wins Jayanagar by 17 votes, making the electoral contest more thrilling than RCB matches. pic.twitter.com/lQRhKntlBe
— Shamanth (@shamant_18) May 13, 2023
ಈ ಬಗ್ಗೆ ಸುದ್ದಿ ತಿಳಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಹಿರಿಯ ಕಾಂಗ್ರೆಸ್ ನಾಯಕರು ಜಯನಗರ ಕ್ಷೇತ್ರದ ಮತ ಎಣಿಕೆ ಸ್ಥಳಕ್ಕೆ ಧಾವಿಸಿದರು. ಆದರೆ ಮತಎಣಿಕೆ ಕೇಂದ್ರ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ಇದರಿಂದ ಕುಪಿತರಾದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರಕ್ಕೆ ನುಗ್ಗುಲು ಮುಂದಾದರು. ಈ ವೇಳೆ ಪೊಲೀಸರು ಮತ್ತು ಡಿ.ಕೆ.ಸುರೇಶ್ ನಡುವೆ ವಾಗ್ವಾದ ನಡೆದು ಕೋಲಾಹಲದ ಪರಿಸ್ಥಿತಿ ನಿರ್ಮಾಣವಾಯಿತು.
ಕಾಂಗ್ರೆಸ್ ಧರಣಿ:
ಜಯನಗರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು ಸಾಧಿಸಿದ್ದರೂ ಪ್ರಭಾವಿ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಮರುಎಣಿಕೆ ನೆಪದಲ್ಲಿ ಫಲಿತಾಂಶ ತಿರುಚಲು ಪ್ರಯತ್ನಿಸಿದರೆಂದು ಆರೋಪಿಸಿ ಕಾಂಗ್ರೆಸ್ ನಾಯಕರು ಮತ ಎಣಿಕೆ ಕೇಂದ್ರದ ಬಳಿ ತಡರಾತ್ರಿ ಧರಣಿ ಕೈಗೊಂಡರು. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಸಂಸದ ಡಿ ಕೆ ಸುರೇಶ್ ಮೊದಲಾದ ಮುಖಂಡರು ಮತ ಎಣಿಕೆ ಕೇಂದ್ರವಾದ ಜಯನಗರದ ಆರ್ ವಿ ಶಿಕ್ಷಣ ಸಂಸ್ಥೆ ಎದುರ ಧರಣಿ ನಡೆಸಿ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
Reporting LIVE from Jayanagar!
CRAZY SCENES HERE!
3 times count happened. Initially Congress' Sowmya Reddy was declared winner by 160 votes. But BJP asks for 4th round of counting, and has been announced as a winner by 16 votes only. Congress' supporters are protesting. pic.twitter.com/kTF7S3eSBK
— Waseem ವಸೀಮ್ وسیم (@WazBLR) May 13, 2023
ಮತ ಎಣಿಕೆ ಕೇಂದ್ರದ ಒಳಗೆ ಏಜೆಂಟರಲ್ಲದ ಬಿಜೆಪಿ ಮುಖಂಡರಾದ ಆರ್ ಅಶೋಕ್, ತೇಜಸ್ವಿ ಸೂರ್ಯ ಮತ್ತಿತರರ ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಈ ಕಾಂಗ್ರೆಸ್ ನಾಯಕರು ಖಂಡಿಸಿದರು.