ಬೆಂಗಳೂರು: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಇದನ್ನು ಯಾರೂ ತಪ್ಪಿಸಲು ಅಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿತವಾಗಿದ್ದ ‘ಜನಸ್ಪಂದನ’ ಸಮಾವೇಶದಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಾಗ ಕೆರೆ ತುಂಬುತ್ತದೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಾಗೂ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೆರೆ ಖಾಲಿ ಬೀಳುತ್ತದೆ. ಬಿಜೆಪಿ ಕಾಲ್ಗುಣ ಒಳ್ಳೆಯದಿದೆ. ಈ ಬಾರಿ ಇಲ್ಲಿನ 18 ಶಾಸಕರ ಸ್ಥಾನದಲ್ಲಿ 10ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಅಂದು ತುಕ್ಡೇ ಗ್ಯಾಂಗ್‌ನ ಮುಖಂಡರಿಗೆ ರಕ್ಷಣೆ ನೀಡಿದ ಕಾಂಗ್ರೆಸ್ ಪಕ್ಷ ಇಂದು ಅವರೊಂದಿಗೆ ಭಾರತ್ ಜೋಡೋ ಯಾತ್ರೆ ಮಾಡುತ್ತಿದೆ.
ಕಾಂಗ್ರೆಸ್ ಪಕ್ಷ ತುಕ್ಡೇ ಗ್ಯಾಂಗಿಗೆ ಬಿರಿಯಾನಿ ನೀಡಿತು, ನಾವು ಸರ್ಜಿಕಲ್ ಸ್ಟ್ರೈಕ್ ಮೂಲಕ ಉತ್ತರ ನೀಡಿದ್ದೇವೆ.
– ಶ್ರೀ @CTRavi_BJP #JanaSpandana pic.twitter.com/tEpENGCd4T
— BJP Karnataka (@BJP4Karnataka) September 10, 2022
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಇದನ್ನು ಯಾರೂ ತಪ್ಪಿಸಲು ಅಸಾಧ್ಯ ಎಂದರು. ನರೇಂದ್ರ ಮೋದಿಯವರ ಸರಕಾರದ ಸಾಧನೆಗಳನ್ನು ವಿವರಿಸಿದರು. ಭಾರತೀಯರನ್ನು ಜೋಡಿಸುವ ಕಾರ್ಯವನ್ನು ಮೋದಿಯವರು ಮಾಡಿದರು. ತುಕಡೇ ಗ್ಯಾಂಗಿನ ಮುಖಂಡರು ಮತ್ತು ಅವರಿಗೆ ಆಶ್ರಯ ಕೊಡುವ ಕಾಂಗ್ರೆಸ್ ಪಕ್ಷದವರು ಭಾರತ್ ಜೋಡೋ ನಾಟಕ ಮಾಡುತ್ತಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.
ಬಾಲ ಬಿಚ್ಚುವವರಿಗೆ ನಾವೂ ಬುಲ್‍ಡೋಜರ್ ಟ್ರೀಟ್‍ಮೆಂಟ್ ಕೊಡಬೇಕಾಗುತ್ತದೆ ಎಂದರಲ್ಲದೆ, ಅರ್ಕಾವತಿ ರೀಡೂ ಪಿತಾಮಹ ಯಾರೆಂದು ಸಿದ್ದರಾಮಯ್ಯ ಉತ್ತರ ಕೊಡುವರೇ? ಸೋಲಾರ್ ಅಲಾಟ್‍ಮೆಂಟ್ ಖದೀಮ ಯಾರೆಂದು ಉತ್ತರಿಸಿ ಎಂದು ಆಗ್ರಹಿಸಿದರು. ಕಲ್ಲಿದ್ದಲು ಹಗರಣ ಮಾಡಿದವರು ಯಾರು, ರೀಡೂ ಹಗರಣ ಮಾಡಿದವರು ಯಾರೆಂದು ಶೀಘ್ರವೇ ಬಯಲಿಗೆ ಬರಲಿದೆ ಎಂದು ತಿಳಿಸಿದರು. ಸರ್ವತೋಮುಖ ಅಭಿವೃದ್ಧಿಗೆ ಬದ್ಧತೆಯೊಂದಿಗೆ ಬಿಜೆಪಿ ಸರಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ರಾಜ್ಯ ಸಮೃದ್ಧವಾಗಿರುತ್ತದೆ. ಇದಕ್ಕೆ ಉದಾಹರಣೆ ಇಡೀ ರಾಜ್ಯದ ಉದ್ದಗಲಕ್ಕೂ ಮಳೆಯಾಗಿದೆ ಮತ್ತು ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ – ಶ್ರೀ @CTRavi_BJP, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು.#JanaSpandana pic.twitter.com/iEMGeBpBOD
— BJP Karnataka (@BJP4Karnataka) September 10, 2022
























































