ಬೆಂಗಳೂರು: ‘ಸೈಕೋ’ ಸುಂದರಿ ಸೈಬರ್ ಕ್ರೈಮ್ ಮೆಟ್ಟಿಲೇರಿದ್ದಾರೆ. ಟ್ವಿಟರ್ ಟ್ರೋಲ್ ಮೇಲೆ ಟಗರು ಬ್ಯೂಟಿ ಗರಂ ಆಗಿದ್ದು ಯಲಹಂಕ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
‘ಸೈಕೋ’ ಸಿನಿಮಾ ಖ್ಯಾತಿಯ ನಟಿ ಅನಿತಾ ಭಟ್ ಅವರು, ಜೈ ಶ್ರೀ ರಾಮ್ ಎಂದು ಬರೆದಿದ್ದ ಫೋಟೋವನ್ನು ಟ್ವಿಟರ್’ನಲ್ಲಿ ಪೋಸ್ಟ್ ಮಾಡಿದ್ದರು. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ
ತೇಜೋವಧೆ ಮಾಡುವಂತೆ ವಯಕ್ತಿಕ ಜೀವನದ ಬಗ್ಗೆ ವ್ಯಕ್ತಿಯೊಬ್ಬ ಕೆಟ್ಟದಾಗಿ ಕಮೆಂಟ್ ಮಾಡಲಾಗಿದೆ ಎಂದು ಆರೋಪಿಸಿರುವ ನಟಿ ಅನಿತಾ ಭಟ್, ಈ ಬಗ್ಗೆ ಯಲಹಂಕ ಸೈಬರ್ ಕ್ರೈಮ್‌ನಲ್ಲಿ ದೂರು ನೀಡಿದ್ದಾರೆ.
Complaint lodged
ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳಬಹುದು. ವೈಯಕ್ತಿಕ ನಿಂದನೆ, ದಾಳಿ ಮಾಡುವ ವೇದಿಕೆ ಅಲ್ಲ. ನಮ್ಮ ಜೀವನಕ್ಕೆ ನಾವೇ ಜವಾಬ್ದಾರರಾದಾಗ ಬೇರೆಯವರಿಗೆ ಮಾತನಾಡುವ ಹಕ್ಕಿಲ್ಲ. One red mark on your profile and your life is spoiled. Take care and be safe. Thanks to @CybercrimeCID pic.twitter.com/wq7L0OBnXN— Anita Bhat (@IamAnitaBhat) September 1, 2021
ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸೆಲೆಬ್ರಿಟಿಗಳು ಟ್ರೋಲ್ ಗಳಿಗೆ ಸಾಫ್ಟ್ ಟಾರ್ಗೆಟ್ ಆಗಿದ್ದಾರೆ. ಅದರಲ್ಲೂ ಆ ಸೆಲೆಬ್ರಿಟಿ ಮಹಿಳೆಯಾಗಿದ್ರೆ ಇನ್ನೂ ಸಾಫ್ಟ್ ಟಾರ್ಗೆಟ್. ಹೀಗಾಗಿಯೇ ವಾದ ಮಾಡಲು ವಿಷಯ ಇಲ್ಲದಾಗ ಕೆಟ್ಟದಾಗಿ ಕಮೆಂಟ್ ಮಾಡಿ ಸುಮ್ಮನಿರಿಸಲು ಯತ್ನಿಸುತ್ತಾರೆ. ಅಂಥವರಿಗೆ ಇವತ್ತು ನೀಡಿರುವ ದೂರು ಎಚ್ಚರಿಕೆ ಆಗಿರಬೇಕು ಎಂದರು.