ಜಗಳೂರು : ಕಾರ್ತಿಕ ಮಾಸದ ಅಂಗವಾಗಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿದೆ.
ಜಗಳೂರು ತಾಲೂಕಿನ ಗಡಿ ಗ್ರಾಮ ಖಾನಾಮಡುಗಿನ ದಾಸೋಹ ಮಠದ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಪ್ರತಿವರ್ಷದಂತೆ ಕಾರ್ತಿಕ ಮಾಸದಲ್ಲಿ ನಡೆಯುವ ರಥೋತ್ಸವವು ಭಾನುವಾರ ಜರುಗಿತು. ಸ್ವಾಮಿಯ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ನಂತರ ಸಾವಿರಾರು ಭಕ್ತರು ತೇರಿನ ಗಾಲಿಗೆ ಕಾಯಿ ಹೊಡೆದು ಪೂಜೆ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ರಥವನ್ನು ಎಳೆದು ಕೈಂಕರ್ಯ ನೆರವೇರಿಸಲಾಯಿತು.
ಹಿರಿಯೂರು ತಾಲೂಕಿನ ಮೇಟಿ ಕುರ್ಕಿ ತಿಪ್ಪೇಸ್ವಾಮಿ ಎಂಬುವವರು ಸ್ವಾಮಿಯ ಮುಕ್ತಿ ಬಾವುಟವನ್ನು ಒಂದು ಲಕ್ಷದ ಹತ್ತು ಸಾವಿರದ ಹನ್ನೇರೆಡು ರೂಪಾಯಿಗಳಿಗೆ ಹಾರಜಿನಲ್ಲಿ ಪಡೆದುಕೊಂಡರು.
ದಾಸೋಹ ಮಠದ ಐರ್ಮಡಿ ಶಿವರ್ಯರ ಮಾರ್ಗದರ್ಶನದಲ್ಲಿ ಜಾತ್ರಾ ವೈಭವದ ವಿಧಿವಿಧಾನಗಳು ನೆರವೇರಿದವು.






















































