ಸಾಮಾನ್ಯವಾಗಿ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಕಾರು ಓಡಿಸುತ್ತಿದ್ದಾಗ ಹೆಲ್ಮೆಟ್ ಧರಿಸಿ ರಸ್ತೆ ಮೇಲೆ ಸಂಚಲನ ಸೃಷ್ಟಿಸಿದ್ದಾನೆ. ಅವನ ವಿಚಿತ್ರ ನಡೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
A teacher from Agra was fined for not wearing helmet inside a car
Post that incident, he now wears a helmet
Magical Amritkaalpic.twitter.com/wXkHqZ0wTt
— 𝕲𝖆𝖓𝖊𝖘𝖍 * (@ggganeshh) December 9, 2025
ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಈ ಘಟನೆ ಜನರಲ್ಲಿ ಕುತೂಹಲ ಮೂಡಿಸಿದೆ. ಕಾರಿನ ಸ್ಟೀರಿಂಗ್ ಹಿಡಿದು ಹೆಲ್ಮೆಟ್ ತೊಟ್ಟಿರುವ ವ್ಯಕ್ತಿಯನ್ನು ಕಂಡ ಜನ ಬೆರಗಾಗಿದ್ದಾರೆ. “ಇದು ಯಾವ ಹೊಸ ನಿಯಮ?” ಎಂದು ಹಲವರು ಪ್ರಶ್ನಿಸಿದ್ದಾರೆ.
ಅದಕ್ಕೆ ವ್ಯಕ್ತಿಯೇ ನೀಡಿದ ಉತ್ತರ ಇನ್ನಷ್ಟು ವಿಚಿತ್ರ. “ಕಾರು ಚಲಾಯಿಸುತ್ತಿದ್ದಕ್ಕೆ ಹೆಲ್ಮೆಟ್ ಹಾಕಿಲ್ಲ ಎಂದು ಪೊಲೀಸರು ನನಗೆ ₹1,100 ದಂಡ ವಿಧಿಸಿದ್ದಾರೆ. ಮತ್ತೆ ಹಾಗಾಗಬಾರದು ಎಂದು ಹೆಲ್ಮೆಟ್ ಹಾಕಿಕೊಂಡಿದ್ದೇನೆ,” ಎಂದು ಹೇಳಿದ್ದಾರೆ.
ಪೊಲೀಸರು ತಪ್ಪಾಗಿ ದಂಡ ವಿಧಿಸಿದ್ದರೋ ಅಥವಾ ವಾಹನ ಸಂಖ್ಯೆಯ ಗೊಂದಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಈ ಘಟನೆಗೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ವೈರಲ್ ವಿಡಿಯೋದಲ್ಲಿನ ವ್ಯಕ್ತಿ ಮೂಲತಃ ಶಿಕ್ಷಕ. ಅವರ ಹೆಸರು ಗುಲ್ಶನ್, ಮತ್ತು ಈಗ ಈ ಪ್ರಹಸನದ ಮೂಲಕ ನೆಟ್‌ಜನ್‌ಗಳ ಗಮನ ಸೆಳೆದಿದ್ದಾರೆ.




















































