ರಾಜ್ಯದ ಪೊಲೀಸ್ ಇಲಾಖೆಗೆ ಮೇಜರ್ಸರ್ಜರಿ ಮಾಡಲಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಸರ್ಕಾರ 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿಯಾಗಿರುವ ರವಿ.ಡಿ.ಚೆನ್ಬಣ್ಣನವರ್ ಅವರನ್ನು ಸಿಐಡಿ ಎಸ್ಪಿಯಾಗಿ ವರ್ಗಾಯಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆ ಕೃಷ್ಣಾ ವರ್ಗಾವಣೆಗೊಂಡರೆ, ಆರ್. ಚೇತನ್ ಅವರು ಮೈಸೂರು ಜಿಲ್ಲಾ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ಹಾವೇರಿ ಜಿಲ್ಲಾ ಎಸ್ಪಿಯಾಗಿ ಹನುಮಾಂತರಾಯ, ನಿಯುಕ್ತಿಯಾದರೆ, ಸಿ.ಬಿ.ರಿಷ್ಯಂತ್ ಅವರು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಡಾ.ಎ.ಎನ್ ಪ್ರಕಾಶ್ ಗೌಡ ಅವರು ಆಂತರಿಕ ಭದ್ರತಾ ವಿಭಾಗದ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.
ದೇವರಾಜು ಅವರನ್ನು ಸಿಐಡಿ ಎಸ್ಪಿಯಾಗಿ, ಕಾರ್ತಿಕ್ ರೆಡ್ಡಿ ವಯರ್‌ಲೆಸ್ ವಿಭಾಗದ ಎಸ್ಪಿಯಾಗಿ, ಡಿ.ಕಿಶೋರ್ ಬಾಬು ಕೋಲಾರ ಎಸ್ಪಿಯಾಗಿ, ಪ್ರದೀಪ್ ಗುಂಟೆ ಮೈಸೂರು ಡಿಸಿಪಿ (ಕಾ.ಸು), ರಾಹುಲ್ ಕಿಮಾರ್ ಎಸ್ ತುಮಕೂರು ಎಸ್ಪಿ ಸ್ಥಾನಕ್ಕೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಸಿಸಿದೆ.