ಬೆಂಗಳೂರು: ಖದಿಮರು ಪೊಲೀಸರನ್ನೂ ಬೆಂಬಿಬಿಡದ ಬೇತಾಳನಂತೆ ಕಾಡುತ್ತಲೇ ಇರ್ತಾರೆ. ಇದೀಗ ಖದೀಮರು ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ಅವರನ್ನೂ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ನಡೆದಿರುವುದು ಅಚ್ಚರಿಯ ಬೆಳವಣಿಗೆ.
ಪ್ರಸ್ತುತ ರೈಲ್ವೇ ವಿಭಾಗದಲ್ಲಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿರುವ, ಹಿಂದಿನ, ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆಯಂತೆ. ಖಾತೆ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರಂತೆ.
ಈ ಸಂಗತಿ ಬಗ್ಗೆ ಸ್ವತಃ ಎಡಿಜಿಪಿ ಭಾಸ್ಕರ್ ರಾವ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಖಾತೆ ಹ್ಯಾಕ್ ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಭಾಸ್ಕರ್ ರಾವ್, “ಯಾರಾದರೂ ನನ್ನ ಖಾತೆಯ ಮೂಲಕ ಹಣ ನೀಡಬೇಕೆಂಬ ಸಂದೇಶ ಬಂದರೆ, ದಯವಿಟ್ಟು ಯಾವುದೇ ಹಣವನ್ನು ಕಳುಹಿಸಬೇಡಿ” ಎಂದು ಬರೆದುಕೊಂಡಿದ್ದಾರೆ.
ಸೈಬರ್ ಕಳ್ಳರ ಕಣ್ಣು ಭಾಸ್ಕರ್ ರಾವ್ ಮೇಲಷ್ಟೇ ಅಲ್ಲ, ಈ ಹಿಂದೆಯೂ ಅನೇಕ ಅಧಿಕಾರಿಗಳಿಗೆ ಇಂತಹಾ ಮುಜುಗರದ ಪರಿಸ್ಥಿತಿ ಎದುರಾಗಿತ್ತು.