ಗದಗ್: ಮುಂದಿನ ಮೂರು ವರ್ಷಗಳಲ್ಲಿ ಹತ್ತು ಸಾವಿರ ಕೋಟಿ ರೂ.ಗಳ ಅನುದಾನವನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗಾಗಿ ಮೀಸಲಿರಸಲಾಗಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.
ಗದಗ್ ನಲ್ಲಿ ಜರುಗಿದ ಸುದ್ದಿಗೋಷ್ಟಿ ನಡೆಸಿದ ಸಿ.ಸಿ.ಪಾಟೀಲ್, ಪೀಣ್ಯ ಕೈಗಾರಿಕಾ ವಸಾಹುತ ಪ್ರದೇಶಗಳ ಮೂಲೂಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂ ಗಳನ್ನು ಬಜೆಟನಲ್ಲಿ ನೀಡಲಾಗಿದ್ದು ಟೌನಶಿಪ್ ನಿರ್ಮಾಣ ಮಾಡಲಾಗುವುದು. ಕೃಷಿ ಆಧಾರಿತ ಕೈಗಾರಿಕೆಗಳಿಗೆ 150 ಕೋಟಿ ರೂ ಸಬ್ಸಿಡಿ ಹಣ ನೀಡಲು ಮುಖ್ಯ ಮಂತ್ರಿ ಒಪ್ಪಿಗೆ ಸೂಚಿಸಿದ್ದು ಆಯವ್ಯಯದಲ್ಲಿ ಮಹಿಳೆಯರಿಗಾಗಿ 2 ಕೋಟಿ ರೂ. ಗಳ ವರೆಗೆ ಪ್ರತಿಶತ 4ರ ಬಡ್ಡಿ ದರದಲ್ಲಿ ಕೈಗಾರಿಕೆ ಆರಂಭಿಸಲು ಸಾಲ ಸೌಲಭ್ಯಗಳನ್ನು ಒದಗಿಸಲಾಗುವದು ಇದರಿಂದ ಮಹಿಳಾ ಉದ್ದಿಮೆದಾರರ ಅಭಿವೃದ್ಧಿಗೆ ಆದ್ಯತೇ ನೀಡಲಾಗಿದೆ. ನೂತನ ಕೈಗಾರಿಕಾ ನೀತಿ 2020-25ರಲ್ಲಿ ಅನೇಕ ಪ್ರೋತ್ಸಾಹ ಅಂಶಗಳಿದ್ದು ಮೂರು ವರ್ಷಗಳ ವರೆಗೆ ವಿದ್ಯುತ್ ಪ್ರತಿ ಯೂನಿಟ್‌ಗೆ 1 ರೂ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದರು.
ಗದಗ ಜಿಲ್ಲೆಯಲ್ಲಿ ನೂತನ ಕೈಗಾರಿಕೆಗಳ ಸ್ಥಾಪನೆಗೆ ವಿಪುಲ ಅವಕಾಶಗಳನ್ನು ಸ್ಥಾಪಿಸಲು ‘ಇನ್ವೆಸ್ಟ ಗದಗ’ ಕಾರ್ಯಕ್ರಮವನ್ನು ಆಯೋಜಿಸಲು ಕ್ರಮ ವಹಿಸಲಾಗುವದು. ಅಲ್ಲದೇ ಇಲಾಖೆ ಹಾಗೂ ನಿಗಮದಲ್ಲಿರುವ ಹಳೆಯ ಕಡತಗಳನ್ನು ಮುಂದಿನ ಎರಡು ತಿಂಗಳೊಳಗಾಗಿ ವಿಲೇ ಮಾಡಲು ಅಗತ್ಯದ ಕ್ರಮ ವಹಿಸಲಾಗುವುದು ಎಂದರು. ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸರಕಾರದಿಂದ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಭಾಗದ ಉದ್ದಿಮೆದಾರರು ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗುವರು ಎಂದು ಸಚಿವ ಸಿ.ಸಿ.ಪಾಟೀಲ್ ಹೇಳಿದರು.