ಬೆಂಗಳೂರು: ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಸಿ.ಟಿ.ರವಿ ಆಡಿರುವ ಮೊಣಚು ಮಾತಿನ ತೀಕ್ಷ್ಣ ಪದಗಳು ಕಾಂಗ್ರೆಸ್ ನಾಯಕರ ಹುಬ್ಬೇರುವಂತೆ ಮಾಡಿದೆ. ನೆಹರೂ ಕುಟುಂಬದ ಹೆಸರಲ್ಲಿ ರಾಜಕೀಯ ಮಾಡುವುದಾದರೆ ನೆಹರೂ ಕುಟುಂಬದ ಹೆಸರನ್ನು ಕಾಂಗ್ರೆಸ್ ಕಚೇರಿಯಲ್ಲಿ ಬಳಸಿಕೊಳ್ಳಲಿ ಎಂದು ಸಿ.ಟಿ.ರವಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದರು.
ಏನಿದು ವಿಚಾರ..?
ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕೆಂಬ ಪ್ರಸ್ತಾಪ ಮುಂದಿಟ್ಟಿದ್ದ ಸಿ.ಟಿ.ರವಿ ಅವರನ್ನು ಟೀಕಿಸುವ ಅಬ್ಬರದಲ್ಲಿ ಕೈ ನಾಯಕರು, ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವುದಲ್ಲ, ಮೊದಲು ರವಿ ಅವರ ಮನಸ್ಸು ಬದಲಾಗಬೇಕಾಗಿದೆ’ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಸುದ್ದಿಗೋಷ್ಠಿಯಲ್ಲಿ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿರುವ ಸಿ.ಟಿ.ರವಿ, ‘ನಾವು ನೆಹರೂ, ಇಂದಿರಾ ಗಾಂಧಿಯವರು ದೇಶಕ್ಕೆ ನೀಡಿರುವ ಕೊಡುಗೆಯನ್ನು ಗೌರವಿಸುತ್ತೇವೆ. ಆದರೆ, ನೆಹರು ಕುಟುಂಬ ಮಾತ್ರವೇ ಎಲ್ಲವನ್ನೂ ಮಾಡಿರುವುದು ಎಂಬಂತೆ ಬಿಂಬಿಸುವುದನ್ನು ನಾವು ವಿರೋಧಿಸುತ್ತೇವೆ’ ಎಂದರು. ಅಷ್ಟೇ ಅಲ್ಲ, ಮೋದಿ, ಅಮಿತ್ ಷಾ, ಯಡಿಯೂರಪ್ಪ ಬಗ್ಗೆ ವ್ಯಂಗ್ಯದ ಮಾತುಗಳನ್ನಾಡುತ್ತಿರುವ ಕಾಂಗ್ರೆಸ್ ನಾಯಕರನ್ನು ಮೊಣಚು ಮಾತಿನಿಂದ ತಿವಿದ ರವಿ, ಇಂದಿರಾ ಕ್ಯಾಂಟೀನ್‌ಗೆ ನೆಹರೂ ಕುಟುಂಬದ ಹೆಸರು ಇಟ್ಟು ರಾಜಕೀಯ ಮಾಡುವುದು ಬೇಡ, ಬೇಕಿದ್ದರೆ ಕಾಂಗ್ರೆಸ್ ಕಚೇರಿಯಲ್ಲಿ ನೆಹರೂ ಬಾರ್, ನೆಹರೂ ಹುಕ್ಕಾ ಬಾರ್ ತೆರೆಯಲಿ ಎಂದು ಗುಡುಗಿದ್ದಾರೆ. ಈ ಮಾತು ಕೈ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಿ.ಟಿ.ರವಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಬಿಜೆಪಿಯು, ಈ ದೇಶಕ್ಕೆ ನೆಹರೂ, ಇಂದಿರಾ ಸಹಿತ ಅನೇಕರು ಕೊಡುಗೆ ನೀಡಿದ್ದಾರೆ. ಆದರೆ ಬರೇ ಗಾಂಧಿ ಕುಟುಂಬವಷ್ಟೇ ದೇಶಕ್ಕೆ ಕೊಡುಗೆ ನೀಡಿದೆ ಎಂಬಂತೆ ಬಿಂಬಿಸಿದ್ದಾರೆ. 217 ಕ್ಕೂ ಅಧಿಕ ಯೋಜನೆಗಳಿಗೆ ಗಾಂಧಿ ಕುಟುಂಬದ ಹೆಸರಿಟ್ಟಿದ್ದಾರೆ. ಈ ದೇಶಕ್ಕೆ ಬೇರೆ ಯಾರೂ ಕೊಡುಗೆ ನೀಡಿಲ್ಲವೇ? ಎಂದು ಟ್ವೀಟ್ ಮಾಡಿದೆ.
ಈ ದೇಶಕ್ಕೆ ನೆಹರೂ, ಇಂದಿರಾ ಸಹಿತ ಅನೇಕರು ಕೊಡುಗೆ ನೀಡಿದ್ದಾರೆ. ಆದರೆ ಬರೇ ಗಾಂಧಿ ಕುಟುಂಬವಷ್ಟೇ ದೇಶಕ್ಕೆ ಕೊಡುಗೆ ನೀಡಿದೆ ಎಂಬಂತೆ ಬಿಂಬಿಸಿದ್ದಾರೆ.
217 ಕ್ಕೂ ಅಧಿಕ ಯೋಜನೆಗಳಿಗೆ ಗಾಂಧಿ ಕುಟುಂಬದ ಹೆಸರಿಟ್ಟಿದ್ದಾರೆ. ಈ ದೇಶಕ್ಕೆ ಬೇರೆ ಯಾರೂ ಕೊಡುಗೆ ನೀಡಿಲ್ಲವೇ?
— BJP Karnataka (@BJP4Karnataka) August 12, 2021
ಸಿ.ಟಿ.ರವಿ ಹೇಳಿಕೆಯನ್ನು ವಿವಾದಾತ್ಮಕ ಹೇಳಿಕೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಸಿ.ಟಿ.ರವಿ ಅವರು ಇತಿಹಾಸವನ್ನು ತಿಳಿದು ಮಾತನಾಡಲಿ ಎಂದು ಎದಿರೇಟು ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಯಿಂದ ರೊಚ್ಚಿಗೆದ್ದಿರುವ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಬಗೆಬಗೆಯ ಕಮೆಂಟ್ ಹರಿಯಬಿಟ್ಟಿದ್ದಾರೆ. ನೆಹರೂ ಅವರ ಹಳೆಯ ಫೊಟೋಗಳನ್ನೂ ಹರಿಯಬಿಟ್ಟಿದ್ದಾರೆ.
ಬಹಳಷ್ಟು ಮಂದಿ, ನಮಗೆ ಬೇಕಿರುವುದು ‘ಇಂದಿರಾ’ ಅಲ್ಲ, ನಮಗೆ ಬೇಕಿರುವುದು ‘ಅನ್ನಪೂರ್ಣೇಶ್ವರಿ’. ಇಂದಿರಾ ಕ್ಯಾಂಟೀನ್ ಹೆಸರು ಬದಲಾಗಲೇಬೇಕು’ ಎನ್ನುತ್ತಾ # RenameIndiraCanteen #WearewithCTRavi #AnnapoornaCanteen ಎಂಬ ಅಭಿಯಾನ ಕೈಗೊಂಡಿದ್ದಾರೆ
ಕಾಂಗ್ರೆಸ್ ಎಟು.. ಬಿಜೆಪಿ ಎದಿರೇಟು
ಈ ನಡುವೆ ‘ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕೆಂದು ಸಿ.ಟಿ.ರವಿ ಅವರು ಒಣ ಪೌರುಷ ತೋರುತ್ತಿದ್ದಾರೆಂದೂ, ತಾಕತ್ತಿದ್ದರೆ ಅದೇ ರೀತಿಯ ಬೇರೆ ಯೋಜನೆ ಆರಂಭಿಸಿ ಎಂಬ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಬಿಜೆಪಿ, ನಮಗೆ ತಾಕತ್ತು ಇದ್ದಿದ್ದರಿಂದಲೇ ತ್ರಿವಳಿ ತಲಾಖ್, 370ನೇ ವಿಧಿ ರದ್ದು ಮಾಡಿದ್ದು. ನಮಗೆ ತಾಕತ್ತು ಇದ್ದಿದ್ದರಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು. ನಮಗೆ ತಾಕತ್ತು ಇದೆ, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುತ್ತೇವೆ. ಇದು ನಮ್ಮ ಪ್ರಣಾಳಿಕೆಯ ಭಾಗವೂ ಹೌದು ಎಂದಿದೆ.
ಕೆಪಿಸಿಸಿ ಮಾಜಿ ವಿಫಲಾಧ್ಯಕ್ಷ @dineshgrao,
ನಮಗೆ ತಾಕತ್ತು ಇದ್ದಿದ್ದರಿಂದಲೇ ತ್ರಿವಳಿ ತಲಾಖ್, 370ನೇ ವಿಧಿ ರದ್ದು ಮಾಡಿದ್ದು. ನಮಗೆ ತಾಕತ್ತು ಇದ್ದಿದ್ದರಿಂದಲೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು.
ನಮಗೆ ತಾಕತ್ತು ಇದೆ, ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುತ್ತೇವೆ. ಇದು ನಮ್ಮ ಪ್ರಣಾಳಿಕೆಯ ಭಾಗವೂ ಹೌದು. pic.twitter.com/eekTZK6C70
— BJP Karnataka (@BJP4Karnataka) August 12, 2021
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿನಲ್ಲಿರುವ ಯೋಜನೆ ಎಷ್ಟು, ನಕಲಿ ಗಾಂಧಿ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಯೋಜನೆಗಳು ಎಷ್ಟು!? ಈ ಬಗ್ಗೆ ಕಾಂಗ್ರೆಸ್ ಚರ್ಚೆಗೆ ಸಿದ್ಧವಿದೆಯೇ? ಅಂಬೇಡ್ಕರ್ ಅವರಿಗೆ ಗೌರವ ನೀಡದ ಕುಟುಂಬ ವ್ಯಾಮೋಹಿಗಳು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು. ದೇಶದ ಯೋಜನೆಗಳನ್ನೂ ತಮ್ಮ ಹೆಸರಿನಲ್ಲಿ ಪ್ರಾರಂಭಿಸಿದರು ಎಂದೂ ಬಿಜೆಪಿ ಪ್ರಶ್ನಿಸಿದೆ.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಹೆಸರಿನಲ್ಲಿರುವ ಯೋಜನೆ ಎಷ್ಟು, ನಕಲಿ ಗಾಂಧಿ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಯೋಜನೆಗಳು ಎಷ್ಟು!? ಈ ಬಗ್ಗೆ ಕಾಂಗ್ರೆಸ್ ಚರ್ಚೆಗೆ ಸಿದ್ಧವಿದೆಯೇ?
ಅಂಬೇಡ್ಕರ್ ಅವರಿಗೆ ಗೌರವ ನೀಡದ ಕುಟುಂಬ ವ್ಯಾಮೋಹಿಗಳು ತಮಗೆ ತಾವೇ ಭಾರತ ರತ್ನ ಕೊಟ್ಟುಕೊಂಡರು. ದೇಶದ ಯೋಜನೆಗಳನ್ನೂ ತಮ್ಮ ಹೆಸರಿನಲ್ಲಿ ಪ್ರಾರಂಭಿಸಿದರು.
— BJP Karnataka (@BJP4Karnataka) August 12, 2021