ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ನಗರ ಪೊಲೀಸರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗಾಗಿ ಐದು ದಿನಗಳ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ನೋಂದಣಿಯನ್ನು ಸೋಮವಾರ (15-12-2025) ಬೆಳಿಗ್ಗೆ 6ರಿಂದ 10ರವರೆಗೆ ನಗರದ ವಿವಿಧ ಶಾಲೆ ಹಾಗೂ ಕಾಲೇಜುಗಳಲ್ಲಿ ನಡೆಸಲಾಗುವುದು. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ.
ನೋಂದಣಿ ಕೇಂದ್ರಗಳಾಗಿ ಗುರುಕುಲ ಪಿಯು ಕಾಲೇಜು (ವೈದ್ಯಮಠ ಸಂಕೀರ್ಣ), ಗುರುದೇವ್ ಪಿಯು ಕಾಲೇಜು (ಸಪ್ತಾಪುರ), ಕೆಯುಡಿ ಕಾಲೇಜು (ಪಾವಟೆ ನಗರ), ಪೂರ್ಣ ಪಿಯು ಕಾಲೇಜು, ಪ್ರಿಸಂ ಪಿಯು ಕಾಲೇಜು, ಕೆಸಿಡಿ ಕಾಲೇಜು, ಸೃಷ್ಟಿ ಪಿಯು ಕಾಲೇಜು (ಹಳಿಯಾಳ ನಾಕಾ), ಕ್ಲಾಸಿಕ್ ಪಿಯು/ಪದವಿ ಕಾಲೇಜು, ಮದೀನಾ ಕಾಲೇಜು (ಭಾರತಿ ನಗರ) ಹಾಗೂ ಸಿದ್ದರಾಮೇಶ್ವರ ಕಾಲೇಜುಗಳನ್ನು ನಿಗದಿಪಡಿಸಲಾಗಿದೆ.
ಕಾರ್ಯಾಗಾರವು ಸೋಮವಾರ ಸಂಜೆ 4ರಿಂದ ರಾತ್ರಿ 8ರವರೆಗೆ ಆರಂಭವಾಗಲಿದ್ದು, ನಂತರದ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ 10ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 8ರವರೆಗೆ ನಡೆಯಲಿದೆ ಎಂದು ಅವರು ಸಾಮಾಜಿಕ ಮಾಧ್ಯಮ ‘X’ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
The Hubballi–Dharwad City Police are organizing a free five-day workshop for candidates preparing for competitive examinations.
Registration will be conducted on Monday, 15-12-2025, from 6:00 AM to 10:00 AM at the following schools and colleges.
Only candidates who register will… pic.twitter.com/dHFcvfCPgw— HUBBALLI DHARWAD CITY POLICE (@compolhdc) December 14, 2025






















































