ವಿಜಯನಗರ: ರಾಜ್ಯ ಸರ್ಕಾರಿ ಸ್ವಾಮ್ಯದ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿ., ವತಿಯಿಂದ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಭವ್ಯ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಈ ಟರ್ಮಿನಲ್ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಸಸಿ ನೆಡುವ ಅಭಿಯಾನದಲ್ಲೂ ಭಾಗಿಯಾದರು.
ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿನ ಪ್ರತಿಯೊಂದು ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯವೂ ಅತ್ಯಗತ್ಯ ಎಂಬುದನ್ನು ಪ್ರತಿಪಾದಿಸಿ, ಬೃಹತ್ ಪ್ತಮಾಣದಲ್ಲಿ ಹಸಿರೀಕರಣ ಕಾರ್ಯಕ್ರಮ ರೂಪಿಸಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್ ಗಳಲ್ಲಿ ಬಹಳ ದಶಕಗಳಿಂದಲೂ ಬಾಕಿ ಉಳಿದಿದ್ದ ಕಾಮಗಾರಿ ಹಾಗೂ ಇತರೆ ಪ್ರಮುಖ ಕಾರ್ಯಗಳಿಗೆ ಸಾರಿಗೆ ಸಚಿವರು ವೇಗ ನೀಡಿದ್ದು, ಟ್ರಕ್ ಟರ್ಮಿನಲ್ ಗಳಲ್ಲಿ ಸ್ಥಳಾವಕಾಶವಿದ್ದಾಗ್ಯೂ ಸಹ ಹಸಿರು ಬೆಳೆಸುವ ಕಾರ್ಯ ಮಾಡದಿರುವುದನ್ನು ಸಹ ಗಮನಿಸಿ ಸಸಿ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಗುರುವಾರ ಸಾರಿಗೆ ಸಚಿವರು ಹೊಸಪೇಟೆ ಟ್ರಕ್ ಟರ್ಮಿನಲ್, ವಿಜಯನಗರ ಜಿಲ್ಲೆಯಲ್ಲಿ ಸುಮಾರು 37.28 ಎಕರೆಯಲ್ಲಿ ಟ್ರಕ್ ಟರ್ಮಿನಲ್ ಹಂತ 1ರ ಮೂಲಭೂತ ಸೌಕರ್ಯದ ಕಾಮಗಾರಿಯನ್ನು ಪರಿಶೀಲಿಸಿದರು..
ಈ ಟ್ರಕ್ ಟರ್ಮಿನಲ್ ಆವರಣದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುತ್ತಿದೆ. ಒಂದೇ ಸೂರಿನಡಿ 38 ಸುಸಜ್ಜಿತ ಕೊಠಡಿಗಳು, ಡಾರ್ಮೆಂಟರಿಗಳು, ಟ್ರಾನ್ಸ್ ಪೋರ್ಟ್ ಕಚರಿಗಳು ಇರುತ್ತವೆ. 294 ಲಾರಿಗಳನ್ನು ಏಕಕಾಲದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಈ ಎಲ್ಲಾ ಕಾಮಗಾರಿಗಳನ್ನುಪ ಮೂರು ತಿಂಗಳ ಅವಧಿಯೊಳಗೆ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಂಜಿನಿಯರುಗಳಿಗೆ ಸಾರಿಗೆ ಸಚಿವರು ನಿರ್ದೇಶನ ನೀಡಿದರು. ಇದೇ ವೇಳೆ, ಹೊಸಪೇಟೆ ಟ್ರಕ್ ಟರ್ಮಿನಲ್ ನಲ್ಲಿ ಟರ್ಬೋ ಸ್ಟೀಲ್ ಮೂಲಕ 1200 ಮರದ ಸಸಿ ನೆಡುವ ಕಾರ್ಯಕ್ರಮಕ್ಕೂ ಸಚಿವ ರಾಮಲಿಂಗ ರೆಡ್ಡಿ ಚಾಲನೆ ನೀಡಿದರು.
ಹೊಸಪೇಟೆ ಶಾಸಕ.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್, ದೇವರಾಜು ಅರಸು ಟ್ರಕ್ ಟರ್ಮಿನಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉಪಸ್ಥಿತರಿದ್ದರು.