ಬೆಳಗಾವಿ: ಮತ್ತೊಂದು ಭೀಕರ ದುರಂತ ಕರುನಾಡನ್ನು ಬೆಚ್ಚಿಬೀಳಿಸಿದೆ. ಮಹಾಲಯ ಅಮಾವಾಸ್ಯೆ ದಿನವಾದ ಬುಧವಾರ ರಾತ್ರಿ ಭಾರೀ ಮಳೆಗೆ ಮನೆಯ ಗೋಡೆ ಕಿಸಿದು ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆಗೋಡೆ ಕುಸಿದು ಒಂದೇ ಕುಟುಂಬದ ಆರು ಜನ ಸೇರಿ ಏಳು ಜನ ಮೃತಪಟ್ಟಿದ್ಸಾರೆ.
ಹಳೆಯ ಮನೆಯ ಛಾವಣಿ ಬಿಚ್ಚಿ ಹೊಸ ಛಾವಣಿ ಹಾಕುವ ಕೆಲಸ ನಡೆಯುತ್ತಿತ್ತು. ಅಲ್ಲೇ ಪಕ್ಕದಲ್ಲಿ ತಗಡಿನ ಶೆಡ್ ಹಾಕಿ ಈ ಕುಟುಂಬ ವಾಸವಾಗಿತ್ತು. ಭಾರೀ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಗೋಡೆಯು ಶೆಡ್ ಮೇಲೆ ಕುಸಿದು ಬಿದ್ದಿದ್ದು ಘೋರ ದುರಂತದಲ್ಲಿ 7 ಮಂದಿ ಬಲಿಯಾಗಿದ್ದಾರೆ.