ಹಾಸನ : ವಿವಿಧ ಮುಸ್ಲಿಂ ಸಂಘಟನೆಗಳು ,ಸ್ವಯಂಸೇವಕರು,ದಾನಿಗಳ ನೆರವಿನೊಂದಿಗೆ 100 ಬೆಡ್ ಗಳ ಮತ್ತೊಂದು ಹೊಸ ಕೊವಿದ್ ಕೇರ್ ಕೇಂದ್ರ ನಗರದಲ್ಲಿ ಪ್ರಾರಂಭವಾಗಿದೆ
ಪ್ರಮುಖವಾಗಿ ನಗರದ ಹ್ಯುಮಾನಿಟೇರಿಯನ್ ಚಾರಿಟಬಲ್ಸ್ ಸರ್ವಿಸ್, ಶಮಾ ಟ್ರಸ್ ಹಾಗೂ ಬೆಂಗಳೂರಿನ ಹೆಚ್.ಬಿ.ಎಸ್ ಆಸ್ಪತ್ರೆ ಸಹಯೋಗದೊಂದಿಗೆ ಈದ್ಗಾ ಮೈದಾನದಲ್ಲಿನ ಚೈಲ್ಡ್ ಹೋಂ ಕಟ್ಟಡದಲಿ ಈ ಕೋವಿಡ್ ಕೇರ್ ಸೆಂಟರ್ ಪ್ರಾಂಭವಾಗಿದೆ.
ಬೆಂಗಳೂರಿನಲ್ಲಿರುವ ಹೆಚ್.ಬಿ.ಎಸ್ ಆಸ್ಪತ್ರೆ ವೈದ್ಯರಾದ ಡಾ ತಾ ಮತೀನ್ ಅವರು ಈ ಕೇಂದ್ರ ಪ್ರಾರಂಭಕ್ಕೆ ಆರ್ಥಿಕ , ವೈದ್ಯಕೀಯ ನೆರವಿನ ಜೊತೆಗೆ 50 ಆಮ್ಲಜನಕ ಸಿಲಿಂಡರ್ ಗಳನ್ನು ಒದಗಿಸಿ ಜೊತೆಗೆ ವೈದಕೀಯ ಸಲಹೆಯ ಜವಾಬ್ದಾರಿ ಕೂಡ ನೀರ್ವಹಿಸುತ್ತಿದ್ದಾರೆ. ಇದಲ್ಲದೆ ಈ ಕೇಂದ್ರ ಪ್ರಾರಂಭಿಕ ಜಿಲ್ಲೆಯ ಮುಸ್ಲಿಂ ಸಮುದಾಯದ ತಜ್ಞ ವೈದ್ಯರ ತಂಡವೂ ಸಹ ಆರ್ಥಿಕ ನೆರವು ನೀಡಿ ಉಚಿತ ಸೇವೆಯನ್ನು ಒದಗಿಸುತ್ತಿದ್ದಾರೆ.
ಸಮರ್ಪಿತ ಸ್ವಯಂ ಸೇವಾ ತಂಡ.:-ಕೊವಿಡ್ 19 ಜಿಲ್ಲೆಯಲ್ಲಿಯೂ ವ್ಯಾಪಿಸುತ್ತಿರುವ ಹಿನ್ನಲೆ ಸುಮಾರು ಮುಸಲ್ಮಾನ ಸಮುದಾಯದ 50 ಮಂದಿ ಯುವಕರು ಹಾಗೂ ಹಿರಿಯರನ್ನೊಳಗೊಂಡ ಸಮರ್ಪಿತ ಸ್ವಯಂಸೇವಾ ತಂಡ ಸೋಂಕಿತರ ನೆರವಿಗಾಗಿ ಇಲ್ಲಿ ಶ್ರಮಿಸುತ್ತಿದೆ. ಇವರೆಲ್ಲಾ ಮನೆಗಳಿಂದ ದೂರ ಉಳಿದು ಸೋಂಕಿತರ ಅಗತ್ಯ ಸೇವೆಗಳಿಗೆ ನೆರವಾಗುತ್ತಿದ್ದಾರೆ.
ಜಿಲ್ಲಾಧಿಕಾರಿ ಅರ್ ಗಿರೀಶ್ ಅವರು ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ಹಾಗೂ ಜಗಜ್ಯೋತಿ ಬಸವೇಶ್ವರರ ಜನ್ಮ ಜಂಯಂತಿಯಾದ ಇಂದು ಈ ಹೊಸ ಕೊವಿದ್ ಕೇರ್ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯ ಕೊವಿಡ್ ಚಿಕಿತ್ಸಾ ಸೌಲಭ್ಯಕ್ಕೆ ಇದೊಂದು ದೊಡ್ಡ ಕೊಡುಗೆ . ಹಲವು ಸಂಘ ಸಂಸ್ಥೆಗಳು ಇಂತಹುದೇ ಪ್ರಯತ್ನಕ್ಕೆ ಕೈ ಜೊಡಿಸಿದರೆ ವೈದ್ಯಕೀಯ ಸೌಲಭ್ಯ ವ್ಯವಸ್ಥೆಗೆ ಇನ್ನಷ್ಟು ಬಲ ಬರಲಿದೆ ಎಂದರು.
ಜಿಲ್ಲೆಗೆ ನಿಗಧಿಪಡಿಸಲಾದ ಕೋಟಾದಂತೆ ಪೂರೈಕೆಯಾಗುವ ಆಮ್ಮಜನಕ ದಲ್ಲಿ ಈ ನೂತನ ಕೋವಿದ್ ಕೇರ್ ಕೇಂದ್ರಕ್ಕೂ ಆಕ್ಸಿಜನ್ ಒದಗಿಲಾಗುವುದು ಎಂದರು. ಅಲ್ಲದೆ ನೂತನ ಕೊವಿದ್ ಕೇರ್ ಕೇಂದ್ರದಲ್ಲಿ ಕೆಲಸ ಮಾಡುವ ಸ್ವಂ ಸೇವಕರು ಹಾಗೂ ಸಿಬ್ಬಂದಿ ಗಳಿಗೆ ಕೊವಿದ್ ಲಸಿಕೆ ಹಾಕಿಸಿಕೊಡುವಂತೆ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಗೌಡ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಸಹ ಮಾತನಾಡಿ ಮುಸ್ಲಿಂ ಸಂಘಟನೆಗಳ ಸಮಾಜ ಮುಖಿ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸರ್ಕಾರದೊಂದಿಗೆ ಸಮುದಾದ ಸಹಭಾಗಿತ್ವ ಶ್ಲಾಘನೀಯ ಎಂದರು.
ಕೋವಿಡ್ ಕೇದ್ರ ಪ್ರಾರಂಭಕ್ಕೆ ಕಾರಣರಾದ ಹಾಗೂ ಸಹಕಾರ, ಆರ್ಥಿಕ ನೆರವು ಮಾರ್ಗದರ್ಶನ ಮತ್ತು ಸೇವೆ ನೀಡುತ್ತಿರುವ ಬೆಂಗಳೂರಿನ ಹೆಚ್ .ಬಿ.ಎಸ್ ಆಸ್ಪತ್ರೆ ಡಾ ತ್ಹ ಮತೀನ್ ,ನೂತಕೊವಿದ್ ಕೇರ್ ಕೇಂದ್ರದಲ್ಲಿ ಉಚಿತ ಸೇವೆ ಒದಗಿಸುತ್ತಿರುವ ವೈದ್ಯರು ಹಾಗು ಕೊರ್ ಕಮಿಟಿ ಸದಸ್ಯರಾದ ಡಾ ಷರೀಫ್ ,ಹಾಸನದ ಹ್ಯುಮ್ಯಾನಿಟೇರಿಯನ್ ಸರ್ವಿಸ್ ಸಂಸ್ಥೆಯ ಮುಖ್ಯಸ್ಥ ರಾದ ಸದರುಲ್ಲಾ ಖಾನ್ ಅವರು ಕೋವಿಡ್ ಕೇರ್ ಕೇಂದ್ರ ಪ್ರಾರಂಭದ ಉದ್ದೇಶ ,ಆಶಯ ನೀಡಲಾಗುವ ಸೌಲಭ್ಯಗಳನ್ನು ವಿವರಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರ್ ಅವರು ಮಾತನಾಡಿ ಕೊವಿದ್ ಕೇರ್ ಕೇಂದ್ರ ಪ್ರಾರಂಭದ ಪಯತ್ನಕ್ಕೆ ಪ್ರಶಂಸೆ ವ್ಯಕ್ತ ಪಡಿಸಿದರು .
ಇದೇ ವೇಳೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಒಂದು ಆಕ್ಸಿಜನ್ ಜನರೇಟರ್ ಯಂತ್ರ ವನ್ನು ನೂತನ ಕೋವಿದ್ ಕೇರ್ ಕೇಂದ್ರಕ್ಕೆ ಕೊಡುಗೆ ಯಾಗಿ ನೀಡಲಾಯಿತು. ಹಿಮ್ಸ್ ನಿರ್ದೇಶಕ ರಾದ ಡಾ|| ರವಿ ಕುಮಾರ್ .ಜಿಲ್ಲಾ ಸರ್ಜನ್ ಡಾ|| ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ , ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಯ ಅಧ್ಯಕ್ಷರಾದ ಹೆಮ್ಮಿಗೆ ಮೋಹನ್, ನಿರ್ದೇಶಕರಾದ ಎಸ್‍ಎಸ್ ಪಾಷಾ,ಶಬ್ಬಿರ್ ಪಾಷಾ,ಉದಯಕುಮಾರ್, ಕೆ.ಟಿ ಜಯಶ್ರೀ, ನಿರ್ಮಾಲಾ ,ಹುಮ್ಯಾನಿಟೇರಿಯನ್ ಚಾರಿಟಬಲ್ ಸಂಸ್ಥೆ ಯ ಕೋರ್ ಕಮಿಟಿ ಸದಸ್ಯರಾದ ಡಾ|| ಬಷೀರ್ ಅಹಮದ್,ಅತಿಖ್ ಉರ್ ರಹಮಾನ್ ,ಡಾ ಸಯ್ಯದ್ ಮೊಹಶೀನ್, ಡಾ|| ಹಬೀಬುರ್ ರಹಮಾನ್ ,ಯಾಸೀರ್ ಸಯೀದ್ , ಮತ್ತಿತರರು ಹಾಜರಿದ್ದರು