ಹಾಸನ: ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಪ್ರೀತಂ ಗೌಡ ಅವರಷ್ಟೇ ಅಲ್ಲ, ಪತ್ನಿ ಕಾವ್ಯ ಕೂಡಾ ಕಮಲ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ.
ಬುಧವಾರ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಪ್ರೀತಂ ಗೌಡ ಪತ್ನಿ ಕಾವ್ಯಾ ನಾಮಪತ್ರ ಸಲ್ಲಿಸಿದ್ದಾರೆ. ಪ್ರೀತಂ ಗೌಡ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವಂತೆಯೇ ಪತ್ನಿ ಕಾವ್ಯಾ ಕಾವ್ಯಾ ಕೂಡಾ ಉಮೇದುವಾರಿಕೆ ಸಲ್ಲಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಉಮೇದುವಾರಿಕೆ ತಿರಸ್ಕೃತಗೊಂಡರೆ ಪರ್ಯಾಯ ಅಭ್ಯರ್ಥಿ ಕಣದಲ್ಲಿರಬೇಕೆಂಬ ಮುಂಜಾಗ್ರತಾ ನಡೆ ಇದಾಗಿದೆ.