ಬೆಂಗಳೂರು: ಗೃಹಲಕ್ಷ್ಮಿ ಹಣ ಮನೆಯ ಮಹಾಲಕ್ಷ್ಮಿಯರನ್ನು ತಲುಪುತ್ತಿಲ್ಲ!! ಹೀಗಂತ ಫ್ರಸ್ಟ್ರೇಟೆಡ್ ಆಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೇ ಸದನದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ವ್ಯಂಗ್ಯವಾಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಹೇಳಿದಾಗ, ಐಟಿ ಹಾಗೂ ಜಿಎಸ್‌ಟಿ ತೆರಿಗೆ ಪಾವತಿದಾರರಿಗೆ ಮಾತ್ರ ತಲುಪಿಲ್ಲ ಎಂದು ಮೊಂಡುವಾದ ಮಾಡುತ್ತಿದ್ದ ಕಾಂಗ್ರೆಸ್ ಸರ್ಕಾರ, ಈಗ ತೆರಿಗೆ ಪಾವತಿಸದೆ ಇರುವವರಿಗೂ ತಲುಪುತ್ತಿಲ್ಲ ಎಂದು ತಪ್ಪು ಒಪ್ಪಿಕೊಂಡಿರುವುದು ಸ್ವಾಗತಾರ್ಹ ಎಂದು ಟೀಕಿಸಿದೆ.
ಗ್ಯಾರಂಟಿ ಘೋಷಿಸುವಾಗ ಯಾವುದೇ ಕಂಡಿಷನ್ ಇಲ್ಲ ಎಂದು ಹೇಳಿ, ಈಗ ವಿವಿಧ ರೀತಿಯ ಕಂಡಿಷನ್‌ಗಳನ್ನು ಹೇರುತ್ತಿರುವುದೇಕೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ನುಡಿದಂತೆ ಕರ್ನಾಟಕದ ಎಲ್ಲಾ ಮನೆಯ ಯಜಮಾನಿಗೆ ಯಾವುದೇ ಷರತ್ತುಗಳಿಲ್ಲದೆ, ಗೃಹಲಕ್ಷ್ಮಿ ಹಣ ತಲುಪುವ ವ್ಯವಸ್ಥೆ ಮಾಡಿ ಎಂದು ಸರ್ಕಾರಕ್ಕೆ ಪ್ರತಿಪಕ್ಷ ಸಲಹೆ ಮಾಡಿದೆ.
ಗೃಹಲಕ್ಷ್ಮಿ ಹಣ ಮನೆಯ ಮಹಾಲಕ್ಷ್ಮಿಯರನ್ನು ತಲುಪುತ್ತಿಲ್ಲ!! ಹೀಗಂತ ಫ್ರಸ್ಟ್ರೇಟೆಡ್ ಆಗಿ ಸಚಿವೆ @laxmi_hebbalkar ಅವರು ಸದನದಲ್ಲಿ ಒಪ್ಪಿಕೊಂಡಿದ್ದಾರೆ!!
ಗೃಹಲಕ್ಷ್ಮಿ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಹೇಳಿದಾಗ, ಐಟಿ ಹಾಗೂ ಜಿಎಸ್‌ಟಿ ತೆರಿಗೆ ಪಾವತಿದಾರರಿಗೆ ಮಾತ್ರ ತಲುಪಿಲ್ಲ ಎಂದು ಮೊಂಡುವಾದ ಮಾಡುತ್ತಿದ್ದ @INCKarnataka… pic.twitter.com/fzJLlQrIqg
— BJP Karnataka (@BJP4Karnataka) December 24, 2024