ಗದಗ : ಕುಡಿತದ ಅಮಲಿನಲ್ಲಿ ಅಂಬ್ಯುಲೆನ್ಸ್ ಚಾಲನೆ ಮಾಡಿ ಕಾರ್‌ಗೆ ಡಿಕ್ಕಿ ಹೊಡಿಸಿದ ಚಾಲಕನಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಗದಗನಲ್ಲಿ ನಡೆದಿದೆ.
ಗದಗ ನಗರದ ಮಲ್ಲಸಮುದ್ರ ಬಳಿ ಘಟನೆ ನಡೆದಿದ್ದು, ಕಾರ್ ಚಾಲಕ ಗೋವಿಂದಪ್ಪ ಲಮಾಣಿಗೆ ಗಂಭೀರ ಗಾಯವಾಗಿದೆ. ಶಿರಹಟ್ಟಿ ಕಡೆಗೆ ಹೊರಟಿದ್ದ ಆ್ಯಂಬ್ಯೂಲೆನ್ಸ್ ಕಾರಿಗೆ ಡಿಕ್ಕಿಯಾಗಿದೆ. ಕುಡಿದು ಆ್ಯಂಬುಲೆನ್ಸ್ ಚಲಾಯಿಸುದ್ದ ಚಾಲಕ ವಿಶ್ವನಾಥ್ ಬೋರಸೆಟ್ಟಿಯ ನಿರ್ಲಕ್ಷ್ಯ ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ರೊಚ್ಚಿಗೆದ್ದ ಸ್ಥಳೀಯರು ಚಾಲಕ ವಿಶ್ವನಾಥ್ ಬೋರಸೆಟ್ಟಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಜೊತೆಗೆ ಆತನ ಇನ್ನೋರ್ವ ಸ್ನೇಹಿತನೂ ಸಹ ಕುಡಿದು ದಾರಿಯುದ್ದಕ್ಕೂ ನಶೆಯಲ್ಲಿರು ಎನ್ನಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ತಪ್ಪಿತಸ್ಥ ಚಾಲಕನನ್ನು ವಶಕ್ಕೆ ಪಡೆದು ಗ್ರಾಮೀಣ ಠಾಣೆಗೆ ಕರೆದೊಯ್ದರು. ಗಾಯಾಳು ಕಾರ್ ಚಾಲಕ ಗೋವಿಂದಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.