ಬೆಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಆರೋಗ್ಯ ಕಾರ್ಯಕರ್ತರಷ್ಟೇ ಅಲ್ಲ, ಸಮಾಜದ ಸ್ವಸ್ಥ್ಯಕ್ಕಾಗಿ ಹೋರಾಡುತ್ತಿರುವ ಪೌರ ಕಾರ್ಮಿಕರೂ ಸಂಕಷ್ಟದಲ್ಲಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಒದಗಿಸುವ ವಿಶೇಷ ಕಾರ್ಯಕ್ರಮವೊಂದು ಗಮನಸೆಳೆಯಿತು.
ಕರಾವಳಿ ಮೂಲದ ಉದ್ಯಮಿ ಗೋವಿಂದ ಬಾಬು ಪೂಜಾರಿ ಒಡೆತನದ ChefTalk ಸಂಸ್ಥೆ ಇಂಥದ್ದೊಂದು ಪ್ರಯತ್ನ ಮಾಡಿದೆ. ದೇಶದ ಖ್ಯಾತ ಆಹಾರೋದ್ಯಮಿ ಗೋವಿಂದ ಬಾಬು ಪೂಜಾರಿ ಮುಂದಾಳುತ್ವದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮೂಲಕ ಸಾವಿರಾರು ಮಂದಿ ಪೌರ ಕಾರ್ಮಿಕರಿಗೆ ಆಹಾರ, ವೈದ್ಯಕೀಯ, ಹಾಗೂ ಸ್ಯಾನಿಟೈಸರ್ ಸಹಿತ ಸೋಂಕು ನಿರೋಧಕ ಪರಿಕರಗಳನ್ನೊಳಗೊಂಡ ವಿತರಿಸಲಾಯಿತು.
ಬೊಮ್ಮನಹಳ್ಳಿಯಲ್ಲಿರುವ ChefTalk ಸಂಸ್ಥೆಯ ಆಡಳಿತ ಕಚೇಯಿ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಈ ಕಿಟ್‌ಗಳನ್ನು ಗೋವಿಂದ ಬಾಬು ಪೂಜಾರಿ ಹಾಗೂ ಸಂಸ್ಥೆಯ ಪ್ರಮುಖರು ವಿತರಿಸಿದರು. ಇದೇ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಆಟೋ ಚಾಲಕರ ಕುಟುಂಬಕ್ಕೂ ಕಿಟ್‌ಗಳನ್ನು ವಿತರಿಸಿದ ಮಾನವೀಯತೆಯ ಸನ್ನಿವೇಶ ಗಮನಸೆಳೆಯಿತು.
ಕೊರೋನಾ ಮೊದಲನೇ ಅಲೆಯ ಸಂದರ್ಭದ ಲಾಕ್‌ಡೌನ್ ವೇಳೆ ಕೂಡಾ ಗೋವಿಂದ ಬಾಬುಪೂಜಾರಿ ಅವರು ಪೌರ ಕಾರ್ಮಿಕರು, ಆಟೋ ಚಾಲಕರು ಹಾಗೂ ಸಂಕಷ್ಟದಲ್ಲಿರುವ ಸಾವಿರಾರು ಕುಟುಂಬಗಳಿಗೆ ಇದೇ ರೀತಿ ಆಹಾರ ಕಿಟ್ ನೀಡಿದ್ದರು.