ಪಣಜಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಪ್ರವಾಸಿ ರಾಜ್ಯ ಗೋವಾದಲ್ಲಿ ಮತದಾರರು ಬಿಜೆಪಿಗೆ ಬಹುಪರಾಕ್ ಹೇಳಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಮಿನಿಮಹಾ ಸಮರದ ಪೈಕಿ ಗೋವಾದಲ್ಲೂ ಬಿಜೆಪಿ ಗದ್ದುಗೆ ಏರಲು ಸಜ್ಜಾಗಿದೆ. ಮತ ಎಣಿಕೆಯುದ್ದಕ್ಕೂ ತೀವ್ರ ಕುತೂಹಲಕಾರಿ ಸನ್ನಿವೇಶವೇ ವ್ಯಕ್ತವಾಗಿದ್ದು ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದರಿಂದ ಕಮಲ ಕಾರ್ಯಕರ್ತರಲ್ಲಿ ಸಂತಸ ಮನೆಮಾಡಿತ್ತು. ಅಧಿಕಾರಕ್ಕೇರಲು ಒಂದೇ ಗೇಣು ಬಾಕಿ ಇದ್ದು ಕಮಲ ಬಾಯಜರು ಕಸರತ್ತಿನಲ್ಲಿ ತೊಡಗಿದ್ದಾರೆ.
ಗೋವಾ: ಬಲಾಬಲ ಹೀಗಿದೆ.
- ಒಟ್ಟು ಸ್ಥಾನಗಳು : 40
- ಮ್ಯಾಜಿಕ್ ಸಂಖ್ಯೆ: 21
- BJP : 20
- CONG: 11
- AAP: 2
- OTHERS: 7