ಬೆಂಗಳೂರು: ಗಣೇಶೋತ್ಸವ ಕುರಿತಂತೆ ರಾಜ್ಯದ ಜನರ ಕುತೂಹಲಕ್ಕೆ ತೆರೆಬಿದ್ದಿದೆ. ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಹಬ್ಬ ಓಕೆ.. ಮನೋರಂಜನೆ ಯಾಕೆ..? ಎಂಬ ಪ್ರಜ್ಞಾವಂತರ ಅಭಿಪ್ರಾಯಕ್ಕೆ ಸರ್ಕಾರ ಮಣೆ ಹಾಕಿದೆ. ಐದು ದಿನಗಳಿಗೆ ಸೀಮಿತಗೊಳಿಸಿ ಗಣೇಶೋತ್ಸವಕ್ಕೆ ಸರ್ಕಾರ ಸಹಮತ ವ್ಯಕ್ತಪಡಿಸಿದೆ.
ಅಂತಿಮವಾಗಿ ಐದು ದಿನಗಳ ಕಾಲ ಆಚರಣೆಗೆ ಅವಕಾಶ ನೀಡಲು ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರು, ಕಠಿಣ ಷರತ್ತುಗಳ ಬಗ್ಗೆಯೂ ಮಾಹಿತಿ