ನೆದರ್‌ಲ್ಯಾಂಡ್ಸ್‌ನಲ್ಲಿನ ‘GAMMA’ WORLD MMA CHAMPIANSHIP ಪಂದ್ಯಾವಳಿಗೆ ಅದ್ಧೂರಿ ತೆರೆ.. ಕೀರ್ತಿ ಪತಾಕೆ ಹಾರಿಸಿದ ವೀರ ಕನ್ನಡಿಗ.. ಕಂಚಿನ ಪದಕ ಗೆದ್ದ ಬೆಂಗಳೂರಿನ ಚಾರ್ಲ್ಸ್ ಪೀಟರ್..
ಆಮ್ಸ್ಟರ್ಡ್ಯಾಮ್: ಪ್ರಸಕ್ತ ವರ್ಷದ (2022ರ) ವಿಶ್ವ ‘GAMMA’ – Mixed Martial Arts ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಚಾರ್ಲ್ಸ್ ಪೀಟರ್ ಅವರು ಕಂಚಿನ ಪದಕ ಗೆದ್ದಿದ್ದಾರೆ.
ನೆದರ್‌ಲ್ಯಾಂಡ್ಸ್‌ನ Amsterdam ನಲ್ಲಿ ಮಾರ್ಚ್ 23 ರಿಂದ ಮಾರ್ಚ್ 27ರ ವರೆಗೆ ಈ ಪಂದ್ಯಾವಳಿ ನಡೆದಿದ್ದು, ಭಾನುವಾರ ನಡೆದ ಮುಕ್ತ ಹೆವಿ ವೇಟ್ ವಿಭಾಗದ ಸೆಮಿಫೈನಲ್ಸ್‌ನಲ್ಲಿ ಭಾರತದ ಚಾರ್ಲ್ಸ್ ಪೀಟರ್ ಅವರು ನೆದರ್ಲ್ಯಾಂಡ್ಸ್ ಬಾಕ್ಸರ್ ಮಿಶಿದ್‌ಜಾನ್ ವಾಲೆಂಟಿನೋ ವಿರುದ್ದ ಸೆಣಸಾಡಿದರು. ಹೊಡೆದಾಟ-ಬಡಿದಾಟದಲ್ಲಿ ಗಂಭೀರವಾಗಿ ಗಾಯಗೊಂಡ ಚಾರ್ಲ್ಸ್ ಪೀಟರ್ ಅವರು ವೀರೋಚಿತ ಸೋಲು ಅನುಭವಿಸಿದರು. ಆದರೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.
#GAMMA World Championship 2021: India finish with 11 Medals,
Peter Charles from #bengaluru (-265 LBS Striking MMA) bags bronze.#MMA #sports @BSBommai @narayanagowdakc @udaygaruda pic.twitter.com/9PZ17PAMhm— Alvin Mendonca (@alvinviews) March 28, 2022
ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳ ಕ್ರೀಡಾಪಟುಗಳು ಈ ಬಾರಿಯ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಿದ್ದಾರೆ. ಈ ಪ್ರತಿಷ್ಠೆಯ ಪಂದ್ಯಾವಳಿಯಲ್ಲಿ ಬೆಂಗಳೂರಿನ ಚಾರ್ಲ್ಸ್ ಪೀಟರ್ ಅವರು ಭಾರತವನ್ನು ಪ್ರತಿನಿಧಿಸಿದ್ದು, ಇದೀಗ ಭಾರತಕ್ಕೆ ಕಂಚು ಪದಕವನ್ನು ಗೆದ್ದು ತರುವ ಮೂಲಕ ವೀರ ಕನ್ನಡಿಗನಾಗಿ ಗುರುತಾಗಿದ್ದಾರೆ.
ಮಾರ್ಚ್ 20ರಂದು ಈ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲು ನೆದರ್‌ಲ್ಯಾಂಡ್ಸ್‌ಗೆ ತೆರಳಿದ್ದ ಚಾರ್ಲ್ಸ್ ಪೀಟರ್‌ಗೆ ಕ್ರೀಡಾ ಸಚಿವ ನಾರಾಯಣ ಗೌಡ ಅವರು ವಿಧಾನಸೌಧದಲ್ಲಿ ತ್ರಿವರ್ಣ ಧ್ವಜ ಹಸ್ತಾಂತರಿಸಿ ಶುಭ ಹಾರೈಸಿ ಬೀಳ್ಕೊಟ್ಟಿದ್ದರು. ಅದೇ ರಾಷ್ಟ್ರಧ್ವಜವನ್ನು ಭಾರತದ ಕೀರ್ತಿ ಪತಾಕೆಯಾಗಿ ಚಾರ್ಲ್ಸ್ ಪೀಟರ್ ಪ್ರದರ್ಶಿಸಿದ್ದಾರೆ.
ಯಾರು ಈ ಚಾರ್ಲ್ಸ್ ಪೀಟರ್?
- ಬೆಂಗಳೂರಿನ ಖ್ಯಾತ ಬಾಕ್ಸರ್ ಬಾಲರಾಜ್ ಅವರ ಪುತ್ರ ಚಾರ್ಲ್ಸ್ ಪೀಟರ್ Mixed Martial Arts ಕ್ರೀಡೆಯಲ್ಲಿ ಹಲವು ಪ್ರಶಸ್ತಿಗಳನ್ನು ಗಳಿಸಿದವರು.
- 6 ಬಾರಿ Mixed Martial Artsನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಗೆದ್ದಿರುವವರು.
- 2 ಬಾರಿ Mixed Martial Arts ವಿಶ್ವ ಚಾಂಪಿಯನ್‌ಶಿಪ್‌ಗಾಗಿ ಸ್ಪರ್ಧಿಸಿದ್ದಾರೆ.
- 2019ರ GAMMA’ – Mixed Martial Arts ಚಾಂಪಿಯನ್‌ಶಿಪ್‌ನಲ್ಲಿ ‘ಹೆವಿ ವೈಟ್’ ವಿಭಾಗದಲ್ಲಿ ಸ್ಪರ್ಧಿಸಿದ್ದರು.
- ಈ ಬಾರಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತದ ಖ್ಯಾತಿಯನ್ನು ಜಾಗತಿಕ ಮಟ್ಟದಲ್ಲಿ ಸಾರಿದ್ದಾರೆ.
- Mixed Martial Arts ಸ್ಪರ್ದಾಳುಗಳಿಗೆ ನಿರಂತರ ತರಬೇತಿ ನೀಡುತ್ತಿರುವ ಚಾರ್ಲ್ಸ್ ಪೀಟರ್ ಅವರು, ಈ ತರಬೇತಿಗಾಗಿಯೇ ಬೆಂಗಳೂರಿನ ಹೆಬ್ಬಾಳ ಕೆಂಪಾಪುರದಲ್ಲಿ ತರಬೇತಿ ಕೇಂದ್ರ ನಡೆಸುತ್ತಿದ್ದಾರೆ. IIFC ಹೆಸರಿನ ಈ ತರಬೇತಿ ಕೇಂದ್ರದಲ್ಲಿ ಪ್ರತೀ ವರ್ಷ 25ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆದಿದ್ದಾರೆ.
- ಚಾರ್ಲ್ಸ್ ಪೀಟರ್ ಅವರ ಪುತ್ರಿ ಆ್ಯಂಡ್ರಿ ಡೆಲ್ಲಿಸ್ ಕೂಡಾ ಇದೇ IIFC ತರಬೇತಿ ಕೇಂದ್ರದಲ್ಲಿ Mixed Martial Arts ತರಬೇತಿ ಪಡೆಯುತ್ತಿದ್ದು, 2019ರಲ್ಲಿ ಕಿರಿಯರ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ.