ಈ ಹೋರಿಯ ಕರಾಮತ್ತು ಕಂಡರೆ ಎಂಥವರೂ ಬೆಚ್ಚಿಬೀಳುತ್ತಾರೆ. 18 ಬೈಕ್ ಗಳನ್ನು ಜಿಗಿದು, ಟ್ರ್ಯಾಕ್ಟರ್ ಟ್ರೈಲರ್ ಮೇಲೆ ಹತ್ತುವ ಹೋರಿಯ ಸಾಹಸ ರೋಮಾಂಚಕಾರಿ.
ಗದಗ ಜಿಲ್ಲೆ ನರಗುಂದ ತಾಲೂಕಿನ ಸುರಕೋಡ ಗ್ರಾಮದ ಶ್ರೀ ಸದ್ಗುರು ಶಿವಾನಂದ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಹೋರಿ ಸಾಹಸವನ್ನು ಪ್ರದರ್ಶನ ಏರ್ಪಡಿಸಲಾಗಿತ್ತು. . ಸುರಕೋಡ ಗ್ರಾಮದ ನಿವಾಸಿಯಾದ ಶಿವನಗೌಡ ರಾಯನಗೌಡ್ರ ಎಂಬರಿಗೆ ಸೇರಿದ ಈ ಹೋರಿ ಜನರ ಕುತೂಹಲದ ಕೇಂದ್ರಬಿಂದುವಾಯಿತು. ಸಾಲು ಸಾಲಾಗಿ ನಿಲ್ಲಿಸಲಾಗಿದ್ದ 18 ಬೀಕ್‌ಗಳನ್ನು, ಒಂದಾದ ಮೇಲೆ ಒಂದರಂತೆ ಈ ಹೋರಿ ಜಿಗಿಯುತ್ತಾ ಕೊನೆಗೆ ಟ್ರ್ಯಾಕ್ಟರ್ ಟ್ರೈಲರ್ ಮೇಲೆ ಹತ್ತಿ ನಿಂತಿದೆ.
ಜಾತ್ರೆಗೆ ಬಂದವರು ಈ ಹೋರಿಯ ಸಾಹಸ ಕಂಡು ಮೂಕ ವಿಸ್ಮಿತರಾದರು. ಈ ರೋಮಾಂಚಕಾರಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೀರಲ್ ಆಗಿದೆ.
ಹೋರಿ ಜಿಗಿತದ ವೀಡಿಯೋ